ADVERTISEMENT

ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ

ಜಾನಪದ ಸಾಂಸ್ಕೃತಿಕ ಸಂಭ್ರಮದಲ್ಲಿ ಸಾಹಿತಿ ಭಾರತಿ ವಸ್ತ್ರದ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 15:54 IST
Last Updated 23 ಡಿಸೆಂಬರ್ 2018, 15:54 IST
ಬೀದರ್‌ನಲ್ಲಿ ಆಯೋಜಿಸಿದ್ದ ಜಾನಪದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಸಾಹಿತಿ ಭಾರತಿ ವಸ್ತ್ರದ ಉದ್ಘಾಟಿಸಿದರು. ಶಿವಶರಣಪ್ಪ ಗಣೇಶಪುರ, ನರಸಮ್ಮ, ರಾಜಕುಮಾರ ಹೆಬ್ಬಾಳೆ, ಗುರುನಾಥ ರಾಜಗೀರಾ, ಡಾ.ಜಗನ್ನಾಥ ಹೆಬ್ಬಾಳೆ, ಎಸ್.ಬಿ. ಕುಚಬಾಳ ಹಾಗೂ ಪ್ರಕಾಶ ಕನ್ನಾಳೆ ಇದ್ದರು
ಬೀದರ್‌ನಲ್ಲಿ ಆಯೋಜಿಸಿದ್ದ ಜಾನಪದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಸಾಹಿತಿ ಭಾರತಿ ವಸ್ತ್ರದ ಉದ್ಘಾಟಿಸಿದರು. ಶಿವಶರಣಪ್ಪ ಗಣೇಶಪುರ, ನರಸಮ್ಮ, ರಾಜಕುಮಾರ ಹೆಬ್ಬಾಳೆ, ಗುರುನಾಥ ರಾಜಗೀರಾ, ಡಾ.ಜಗನ್ನಾಥ ಹೆಬ್ಬಾಳೆ, ಎಸ್.ಬಿ. ಕುಚಬಾಳ ಹಾಗೂ ಪ್ರಕಾಶ ಕನ್ನಾಳೆ ಇದ್ದರು   

ಬೀದರ್: ‘ಹಿಂದೆ ಜಾನಪದವು ಜನರ ಬದುಕಿನ ಭಾಗವಾಗಿತ್ತು. ಆಧುನಿಕತೆಯ ಪ್ರಭಾವದಿಂದಾಗಿ ಇಂದು ಮೂಲ ಸ್ವರೂಪ ಕಳೆದುಕೊಳ್ಳುತ್ತಿದೆ. ಆದ್ದರಿಂದ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ’ ಎಂದು ಸಾಹಿತಿ ಭಾರತಿ ವಸ್ತ್ರದ ಹೇಳಿದರು.

ನಗರದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ  ಘಟಕ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ಜಾನಪದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಆಧುನಿಕತೆಯ ಪ್ರಭಾವದಿಂದಾಗಿ ಕುಟ್ಟುವ, ಬೀಸುವ ಪದಗಳು ಮಾಯವಾಗಿವೆ. ಜಾನಪದ ಸಾಹಿತ್ಯದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಜಾನಪದ ಉಳಿಸುವ ಪ್ರಯತ್ನ ನಡೆದಿರುವುದು ಅಭಿನಂದನಾರ್ಹವಾಗಿದೆ’ ಎಂದರು.

ADVERTISEMENT

ಮಾತೃಭೂಮಿ ಟ್ರಸ್ಟ್‌ನ ಕಾರ್ಯದರ್ಶಿ ಗುರುನಾಥ ರಾಜಗೀರಾ ಮಾತನಾಡಿ, ‘ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ನಮ್ಮ ಮೂಲ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾಗಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಾನಪದ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ, ‘ಜಾನಪದವು ನಮ್ಮ ನಾಡಿನ ಸಂಸ್ಕೃತಿಯ ಭದ್ರ ಬುನಾದಿಯಾಗಿದೆ’ ಎಂದರು.

ಮದರ್‌ ತೆರೆಸಾ ಮಹಿಳಾ ಸಂಘದ ನರಸಮ್ಮ , ಶಾಂತಮ್ಮ ಹಾಗೂ ತಂಡದವರು ಜನಪದ ಗೀತೆಗಳನ್ನು ಹಾಡಿದರು.

ಉಪನ್ಯಾಸಕ ಎಸ್.ಬಿ. ಕುಚಬಾಳ ಪ್ರಾಸ್ತವಿಕವಾಗಿ ಮಾತನಾಡಿದರು.

ಶಿವಶರಣಪ್ಪ ಗಣೇಶಪುರ ಸ್ವಾಗತಿಸಿದರು. ಡಾ.ರಾಜಕುಮಾರ ಹೆಬ್ಬಾಳೆ ನಿರೂಪಿಸಿದರು. ಪ್ರಕಾಶ ಕನ್ನಾಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.