ADVERTISEMENT

ಗುಲಬರ್ಗಾ ವಿವಿ ಯೋಗಾಸನ ತಂಡಕ್ಕೆ ಮನ್ನಳ್ಳಿ ಕಾಲೇಜು ವಿದ್ಯಾರ್ಥಿನಿಯರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 13:30 IST
Last Updated 24 ಡಿಸೆಂಬರ್ 2021, 13:30 IST
ಗುಲಬರ್ಗಾ ವಿಶ್ವವಿದ್ಯಾಲಯದ ಯೋಗಾಸನ ತಂಡಕ್ಕೆ ಆಯ್ಕೆಯಾದ ಬೀದರ್ ತಾಲ್ಲೂಕಿನ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಚಂದ್ರಿಕಾ ನಾಗಶೆಟ್ಟಿ, ಪಾರ್ವತಿ ಬಕ್ಕಪ್ಪ ಹಾಗೂ ಪೂಜಾ ಶಿವರಾಜ
ಗುಲಬರ್ಗಾ ವಿಶ್ವವಿದ್ಯಾಲಯದ ಯೋಗಾಸನ ತಂಡಕ್ಕೆ ಆಯ್ಕೆಯಾದ ಬೀದರ್ ತಾಲ್ಲೂಕಿನ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಚಂದ್ರಿಕಾ ನಾಗಶೆಟ್ಟಿ, ಪಾರ್ವತಿ ಬಕ್ಕಪ್ಪ ಹಾಗೂ ಪೂಜಾ ಶಿವರಾಜ   

ಬೀದರ್: ಗುಲಬರ್ಗಾ ವಿಶ್ವವಿದ್ಯಾಲಯದ ಯೋಗಾಸನ ತಂಡಕ್ಕೆ ಬೀದರ್ ತಾಲ್ಲೂಕಿನ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನ ತೋರಿದ ಕಾಲೇಜಿನ ಪಾರ್ವತಿ ಬಕ್ಕಪ್ಪ, ಪೂಜಾ ಶಿವರಾಜ ಹಾಗೂ ಚಂದ್ರಿಕಾ ನಾಗಶೆಟ್ಟಿ ತಂಡಕ್ಕೆ ಆಯ್ಕೆಯಾದರು.

ವಿದ್ಯಾರ್ಥಿನಿಯರು ಡಿ. 25 ರಿಂದ ಓರಿಸ್ಸಾದ ಭುವನೇಶ್ವರದ ಕಲಿಂಗ ಇನ್‍ಸ್ಟಿಟ್ಯೂಟ್ ಆಫ್ ಇಂಡಸ್ಟ್ರೀಯಲ್ ಟೆಕ್ನಾಲಜಿಯಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಮಟ್ಟದ ಯೋಗ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಕಾಲೇಜು ವಿದ್ಯಾರ್ಥಿನಿಯರು ವಿವಿಧ ಕ್ರೀಡೆಗಳಲ್ಲಿ ಪ್ರತಿಭೆ ಮೆರೆಯುತ್ತಿದ್ದಾರೆ. ಇದೀಗ ಗುಲಬರ್ಗಾ ವಿಶ್ವವಿದ್ಯಾಲಯದ ಯೋಗಾಸನ ತಂಡಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ ಎಂದು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಚಾರ್ಯ ವಿನಾಯಕ ಕೋತಮಿರ ನುಡಿದರು.

ದೈಹಿಕ ಶಿಕ್ಷಣ ಬೋಧಕಿ ಊರ್ವಶಿ ಕೂಡ್ಲಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.