ಲೈಂಗಿಕ ದೌರ್ಜನ್ಯ –ಪ್ರಾತಿನಿಧಿಕ ಚಿತ್ರ
ಔರಾದ್ : ಶಾಸಕ ಪ್ರಭು ಚವಾಣ್ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಅವರ ಮಗ ಪ್ರತೀಕ್ ಚವಾಣ್ ಸೇರಿದಂತೆ ಇತರೆ ಎಂಟು ಜನರ ವಿರುದ್ಧ ಮಹಾರಾಷ್ಟ್ರದ ಸಂತ್ರಸ್ತ ಯುವತಿಯ ತಾಯಿ ತಾಲ್ಲೂಕಿನ ಹೊಕ್ರಾಣಾ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.
‘2023ರ ಡಿಸೆಂಬರ್ 25ರಂದು ಮಗಳ ನಿಶ್ಚಿತಾರ್ಥ ಶಾಸಕೀ ಪುತ್ರ ಪ್ರತೀಕ್ ಚವಾಣ್ ಜತೆ ಔರಾದ್ ತಾಲ್ಲೂಕಿನ ಬೊಂತಿಯ ಘಮಸುಬಾಯಿ ತಾಂಡಾದಲ್ಲಿ ಆಗಿದೆ. ಜುಲೈ 5ರಂದು ಅವರ ಮನೆಗೆ ಹೋಗಿ ಮದುವೆ ಯಾವಾಗ ಮಾಡುತ್ತೀರಿ ಎಂದು ಕೇಳಿದಾಗ, ಶಾಸಕರು ಹಾಗೂ ಅವರ ಪತ್ನಿ, ಪುತ್ರ ಸೇರಿದಂತೆ ಎಂಟು ಜನರು ಸೇರಿ ನಮ್ಮನ್ನು ಹೀಯಾಳಿಸಿ ಹಲ್ಲೆ ಮಾಡಿದ್ದಾರೆ’ ಎಂದು ದೂರಿದ್ದಾರೆ.
‘ಆಗ ಮಗನ ಕೊರಳಲ್ಲಿದ್ದ ಚಿನ್ನದ ಸರ, ಮೊಬೈಲ್ ಫೋನ್ ಕಿತ್ತುಕೊಂಡಿದ್ದಾರೆ. ದೌರ್ಜನ್ಯ ಮಾಡಿದ ಅವರೇ ನನ್ನ ಹಾಗೂ ನನ್ನ ಪತಿ, ಮಗನ ಮೇಲೆ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಏನಾದರೂ ಆದರೆ ಶಾಸಕರೇ ನೇರ ಹೊಣೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರತೀಕ್ ಚವಾಣ್ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸ್ ಇಲಾಖೆ ಎರಡು ತಂಡಗಳನ್ನು ರಚಿಸಿದ್ದು, ಹುಡುಕಾಟ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.