ADVERTISEMENT

ಹುಲಸೂರ | 'ಗುರು ಕರುಣಿಸಿದರೆ ಬದುಕೆಲ್ಲ ಬೆಳಕು’: ಪ್ರಭುದೇವರು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 6:15 IST
Last Updated 5 ಆಗಸ್ಟ್ 2025, 6:15 IST
ಹುಲಸೂರ ಪಟ್ಟಣದ ಹೊರವಲಯದ ಇಕ್ಬಾಲ್ ಪಟೇಲ್ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಶರಣ ಚಿಂತನ ಗೋಷ್ಠಿ ಕಾರ್ಯಕ್ರಮದಲ್ಲಿ ಲಿಂಗಾಯತ ಮಹಾಮಠದ ಪ್ರಭು ದೇವರು ಸ್ವಾಮೀಜಿ ಮಾತನಾಡಿದರು
ಹುಲಸೂರ ಪಟ್ಟಣದ ಹೊರವಲಯದ ಇಕ್ಬಾಲ್ ಪಟೇಲ್ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಶರಣ ಚಿಂತನ ಗೋಷ್ಠಿ ಕಾರ್ಯಕ್ರಮದಲ್ಲಿ ಲಿಂಗಾಯತ ಮಹಾಮಠದ ಪ್ರಭು ದೇವರು ಸ್ವಾಮೀಜಿ ಮಾತನಾಡಿದರು   

ಹುಲಸೂರ: ‘ಗುರುವಿನ ಕೈಹಿಡಿದು ನಡೆದರೆ, ಪಥಭ್ರಷ್ಟರಾಗುವ ಭಯವಿಲ್ಲ. ಗುರು ದೊರೆಯದ ಮುನ್ನ ಇರುವುದೆಲ್ಲ ಕತ್ತಲೆ, ಗುರು ಕರುಣಿಸಿದರೆ ಬದುಕೆಲ್ಲ ಬೆಳಕು ಮೂಡಲಿದೆ’ ಎಂದು ಲಿಂಗಾಯತ ಮಹಾಮಠದ ಪ್ರಭುದೇವರು ಸ್ವಾಮೀಜಿ ಹೇಳಿದರು.

ಪಟ್ಟಣದ ಹೊರವಲಯದ ಇಕ್ಬಾಲ್ ಪಟೇಲ್ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಬಸವ ಕೇಂದ್ರ ತಾಲ್ಲೂಕು ಘಟಕ ವತಿಯಿಂದ ಆಕಾಶ ಖಂಡಾಳೆ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಶರಣ ಚಿಂತನ ಗೋಷ್ಠಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಕ್ಷಮಿಸುವ ಗುಣ ಬಹುದೊಡ್ಡದು. ವ್ಯಕ್ತಿಯ ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ. ಕ್ಷಮೆಯ ಉದಾಹರಣೆ ನೋಡಬೇಕಾದರೆ ತಾಯಿಯಲ್ಲಿ ನೋಡಬೇಕು. ಮಗು ಎಂತಹ ತಪ್ಪು ಮಾಡಿದರೂ, ತಾಯಿ ಕ್ಷಮಿಸುತ್ತಾಳೆ. ಅದೇ ರೀತಿ 12ನೇ ಶತಮಾನದಲ್ಲಿ ಗುರು ಬಸವಣ್ಣನವರು, ಕಳ್ಳರು ಆಕಳನ್ನು ಕದ್ದೊಯ್ದಾಗಲೂ ಕ್ಷಮಿಸಿದರು. ಅಂತಹ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

‘ವಿಶ್ವದಲ್ಲಿ ವಚನ ಸಾಹಿತ್ಯವೇ ಅತ್ಯಂತ ಮೌಲ್ಯಯುತ ಸಾಹಿತ್ಯ. ಅದು ಸರ್ವಕಾಲಕ್ಕೂ ಸರ್ವರಿಗೂ ಬದುಕಿನ ಹೆಗ್ಗುರುತುಗಳ ವಿಚಾರವಾಗಿದೆ. ವಚನ ಸಾಹಿತ್ಯದ ಮೌಲ್ಯಗಳು ಇಂದಿನ ಯುವ ಪೀಳಿಗೆಯ ಭವಿಷ್ಯಕ್ಕೆ ಅತ್ಯವಶ್ಯವಾಗಿದೆ’ ಎಂದು ಪ್ರತಿಪಾದಿಸಿದರು.

ಜಿ.ಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಮಾತನಾಡಿ, ‘ವಿದ್ಯಾವಂತರು ಸಮಾಜ ಸೇವೆಯಲ್ಲಿ ತೊಡಗುವ ಮೂಲಕ ಸಮಾಜವನ್ನು ಅಭಿವೃದ್ಧಿಗೊಳಿಸಬೇಕಾಗಿದೆ. ಆಸೆ ಆಮಿಷಗಳಿಲ್ಲದೆ, ಸ್ಥಾನಮಾನ ಅಪೇಕ್ಷಿಸದೆ, ಬಸವಾದಿ ಶರಣರ ತತ್ವ ಸಿದ್ಧಾಂತ ಪ್ರಸಾರ ಮಾಡುವ ಹೊಣೆಗಾರಿಕೆ ಈ ಕಾಲದ ಯುವ ಸಮುದಾಯದ ಮೇಲಿದೆ. ಶರಣರ ಚಿಂತನೆಗಳು ಜನ ಸಮುದಾಯಕ್ಕೆ ತಲುಪಿಸಿದವರು ತಾವಾಗಿಯೇ ಅಸ್ಮಿತೆಯೊಂದನ್ನು ರೂಪಿಸಿಕೊಳ್ಳಲು ಸಾಧ್ಯ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ತಾಲ್ಲೂಕು ಘಟಕದ ಸದಸ್ಯರನ್ನು ಸನ್ಮಾನಿಸಲಾಯಿತು. ಪ್ರವೀಣ ಕಾಡಾದಿ, ಲತಾ ಹಾರಕೂಡೆ, ಜಗದೀಶ ಉದಾನೆ, ಷಣ್ಮುಖ ಪಾಟೀಲ, ನವೀನ ಗುಂಗೆ, ಫಯಾಜ್ ಪಟೇಲ್, ಮಹಾದೇವ ಮಹಾಜನ, ಸಚಿನ ಕವಟೆ, ರಾಜಕುಮಾರ ತೊಂಡಾರೆ, ರೂಪೇಶ ಪಾಂಚಾಳ, ತಾಲ್ಲೂಕು ಬಸವ ಕೇಂದ್ರದ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.