
ಪ್ರಜಾವಾಣಿ ವಾರ್ತೆ
ಬೀದರ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತಾಲ್ಲೂಕಿನ ಯದಲಾಪೂರ ಗ್ರಾಮದ ಚಂದ್ರಕಾಂತ ಶಿವರಾಜ ಎಂಬುವವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಸುಟ್ಟು ಹೋಗಿದೆ. ಸರ್ವೇ ನಂಬರ್ 154/3 ಜಮೀನಿನಲ್ಲಿ ಐದಾರೂ ಅಡಿಗಳಷ್ಟು ಎತ್ತರಕ್ಕೆ ಕಬ್ಬು ಬೆಳೆದಿತ್ತು. ಆದರೆ, ಸೋಮವಾರ ಶಾರ್ಟ್ ಸರ್ಕ್ಯೂಟ್‌ನಿಂದ ಸಂಪೂರ್ಣ ಸುಟ್ಟು ಹೋಗಿದ್ದು, ₹3 ಲಕ್ಷ ನಷ್ಟ ಉಂಟಾಗಿದೆ. ಸರ್ಕಾರ ಪರಿಹಾರ ನೀಡಬೇಕೆಂದು ಚಂದ್ರಕಾಂತ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.