ADVERTISEMENT

ಲಾಡಗೇರಿ ಹಿರೇಮಠದಲ್ಲಿ ಶ್ರಾವಣ ಸಮಾರೋಪ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 13:48 IST
Last Updated 28 ಆಗಸ್ಟ್ 2022, 13:48 IST
ಬೀದರ್‌ನ ಲಾಡಗೇರಿ ಹಿರೇಮಠ ಸಂಸ್ಥಾನದ ಗಂಗಾಧರ ಶಿವಾಚಾರ್ಯರ ನೇತೃತ್ವದಲ್ಲಿ ಭಕ್ತರು ಲಕ್ಷ ಬಿಲ್ವಾರ್ಚನೆ ಮಾಡಿದರು
ಬೀದರ್‌ನ ಲಾಡಗೇರಿ ಹಿರೇಮಠ ಸಂಸ್ಥಾನದ ಗಂಗಾಧರ ಶಿವಾಚಾರ್ಯರ ನೇತೃತ್ವದಲ್ಲಿ ಭಕ್ತರು ಲಕ್ಷ ಬಿಲ್ವಾರ್ಚನೆ ಮಾಡಿದರು   

ಬೀದರ್‌: ಶ್ರಾವಣ ಮಾಸದ ಅಂಗವಾಗಿ ನಗರದ ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ ವಿಶ್ವಶಾಂತಿ, ಲೋಕ ಕಲ್ಯಾಣಾರ್ಥವಾಗಿ ಶಿವ ಭಜನೆ, ರುದ್ರಾಭಿಷೇಕ, ಲಕ್ಷ ಬಿಲ್ವಾರ್ಚನೆ, ಲಿಂಗೈಕ್ಯ ಪರ್ವತಲಿಂಗ ಶಿವಾಚಾರ್ಯರ 15ನೇ ಸ್ಮರಣೋತ್ಸವ ಹಾಗೂ ಶ್ರಾವಣ ಸಮಾರೋಪ ಕಾರ್ಯಕ್ರಮ ನಡೆಯಿತು.

ಗಂಗಾಧರ ಶಿವಾಚಾರ್ಯರ ಸಾನ್ನಿಧ್ಯ ಹಾಗೂ ಲಾಡಗೇರಿ ಹಿರೇಮಠ ಸಂಸ್ಥಾನದ ಗಂಗಾಧರ ಶಿವಾಚಾರ್ಯರ ನೇತೃತ್ವದಲ್ಲಿ ಭಕ್ತರು ಲಕ್ಷ ಬಿಲ್ವಾರ್ಚನೆ ಮಾಡಿದರು.

ನಗರದ ವಿವಿಧ ಬಡಾವಣೆಗಳ ಭಕ್ತರು ಲಿಂಗೈಕ್ಯ ಪರ್ವತಲಿಂಗ ಶಿವಾಚಾರ್ಯರ ಗದ್ದುಗೆ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ADVERTISEMENT

ಗಾಂಧಿ ಗಂಜ್ ಸಹಕಾರ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಉದ್ಯಮಿ ಸೋಮಶೇಖರ ಪಾಟೀಲ ಗಾದಗಿ ದಂಪತಿ, ಉದ್ಯಮಿ ಆಕಾಶ ಪಾಟೀಲ ಸೇರಿದಂತೆ ಮಠದ ಭಕ್ತಾದಿಗಳಿಗೆ ಶ್ರೀಗಳು ಶಾಲು ಹೊದಿಸಿ ಸನ್ಮಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.