ADVERTISEMENT

ಸಿದ್ಧರಾಮೇಶ್ವರರ ತತ್ವ, ಆದರ್ಶ ಪಾಲಿಸಿ: ತಹಶೀಲ್ದಾರ್ ಅಂಜುಂ ತಬಸುಮ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:27 IST
Last Updated 17 ಜನವರಿ 2026, 6:27 IST
ಹುಮನಾಬಾದ್ ತಹಶೀಲ್ದಾರ್‌ ಕಚೇರಿಯಲ್ಲಿ ಆಯೋಜಿಸಿದ್ದ ಸಿದ್ಧರಾಮೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಂಜುಂ ತಬಸುಮ್ ಮಾತನಾಡಿದರು  
ಹುಮನಾಬಾದ್ ತಹಶೀಲ್ದಾರ್‌ ಕಚೇರಿಯಲ್ಲಿ ಆಯೋಜಿಸಿದ್ದ ಸಿದ್ಧರಾಮೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಂಜುಂ ತಬಸುಮ್ ಮಾತನಾಡಿದರು     

ಹುಮನಾಬಾದ್: ‘ಗುರುಸಿದ್ಧರಾಮೇಶ್ವರರು ಜನರಲ್ಲಿನ ಮೌಢ್ಯ, ಜಾತಿ ಪದ್ಧತಿ ತೊಲಗಿಸಿ, ಸಮಾನತೆ ಸಾರಿದ್ದರು’ ಎಂದು ತಹಶೀಲ್ದಾರ್ ಅಂಜುಂ ತಬಸುಮ್ ಹೇಳಿದರು. 

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ತಮ್ಮ ಜೀವನದಲ್ಲಿ ಸಿದ್ಧರಾಮೇಶ್ವರರ ತತ್ವಾದರ್ಶ ಪಾಲಿಸಿ, ಕಾಯಕ ನಿಷ್ಠೆ ಮಾಡಬೇಕು. ಯಾವುದೇ ಒಂದು ಸಮಾಜ ಆರ್ಥಿಕ ಶೈಕ್ಷಣಿಕವಾಗಿ ಬೆಳೆಯಬೇಕಾದರೆ ಮೊದಲು ಶಿಕ್ಷಣ ಪಡೆದುಕೊಳ್ಳಬೇಕು’ ಎಂದರು. ಈ ಸಂದರ್ಭದಲ್ಲಿ ಸಂಜು ವಾಡೇಕರ್, ಹನುಮಂತ ಚದ್ರಿ, ಅಶೋಕ್ ಗಡವಂತಿ, ದತ್ತು, ಮಾಣಿಕ್, ವಿಜು ಪವರ್, ಪ್ರಕಾಶ್, ಜೀತು ವಾಡೇಕರ್, ಈಶ್ವರ್, ವೈಜಿನಾಥ, ಈಶ್ವರ್ ದೊಡ್ಡಮನಿ, ವೆಂಕಟ್ ಸೇರಿದಂತೆ ಇತರರು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT