ಬೀದರ್: ವಿಜಯದಶಮಿ ಅಂಗವಾಗಿ ನಗರದ ಗುರುದ್ವಾರದ ಬಳಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿಖ್ ಧರ್ಮದ ಯುವಕರು ಶೌರ್ಯ ಮತ್ತು ಸಾಹಸ ಪ್ರದರ್ಶಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ನಟ ಅಜಯ್ ದೇವಗನ್‌ರಂತೆ ಜೋಡಿ ಕುದುರೆ ಮೇಲೆ ಯುವಕರು ನಿಂತು, ಸವಾರಿ ಮಾಡಿ ಗಮನ ಸೆಳೆದರು. ಕತ್ತಿ ವರಸೆ ಪ್ರದರ್ಶಿಸಿದರು. ಪಂಜಾಬಿನ ಅಮೃತಸರದ ಬಾಬಾ ಬಕಾಲಾ ಸಾಹೇಬ್ ಮಿಷಲ್ ಶಹೀದ್ ತರ್ನಾ ದಲ್ ಸ್ವಯಂ ಸೇವಕರ ರೋಚಕ ಪ್ರದರ್ಶನಕ್ಕೆ ಜನ ಮನಸೋತರು.
ತರ್ನಾ ದಲ್ 16ನೇ ಮುಖ್ಯಸ್ಥ ಬಾಬಾ ಜೋಗಾಸಿಂಗ್ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಯುವಕರು ಸಾಹಸ ಪ್ರದರ್ಶಿಸಿದರು. ಹಾಗೂ 120ಕ್ಕೂ ಹೆಚ್ಚು ಕುದರೆ ಓಟ ನೀಡಿ ಭೇಷ್ ಎನಿಸಿಕೊಂಡರು.
ಸುಮಾರು ಮೂರು ಗಂಟೆ ನಡೆದ ವಿವಿಧ ಪ್ರದರ್ಶನಗಳು ನೆರೆದಿದ್ದವರನ್ನು ಮಂತ್ರ ಮುಗ್ಧಗೊಳಿಸಿತು. ಚಪ್ಪಾಳೆ ತಟ್ಟಿ ಅದಕ್ಕೆ ಮೆಚ್ಚುಗೆ ಸೂಚಿಸಿದರು.
ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರು ಚಾಲನೆ ನೀಡಿದರು. ಕೌಠಾದ ವೈಷ್ಣವಿಮಾತಾ ಪೀಠಾಧಿಪತಿ ಅಮೃತರಾವ್, ಭಗತ ಸಿಂಗ್ ಯುತ್ ಬ್ರಿಗೇಡ್ ರಾಷ್ಟ್ರೀಯ ಅಧ್ಯಕ್ಷ ಸರ್ದಾರ್ ಜಸ್ಪ್ರೀತ್ ಸಿಂಗ್ (ಮೊಂಟಿ), ನಗರಸಭೆ ಸದಸ್ಯರಾದ ಶಶಿಧರ ಹೊಸಳ್ಳಿ, ಅರುಣ್ ಹೊತಪೇಟೆ, ಮುಖಂಡರಾದ ವೀರಶೆಟ್ಟಿ ಖ್ಯಾಮಾ, ಭೀಮಣ್ಣ, ಪಪ್ಪು ಪಾಟೀಲ್ ಖಾನಾಪೂರ, ಸರ್ದಾರ್ ಶೇರ್ ಸಿಂಗ್, ಸರ್ದಾರ್ ಜೋಗಿಂದರ್ ಸಿಂಗ್ ಸೈನಿ, ಡಾ.ನರೇಂದ್ರಸಿಂಗ್ ಸೈನಿ, ಸರ್ದಾರ್ ಸ್ವರ್ಣ ಸಿಂಗ್, ಸರ್ದಾರ್ ಜಸ್ವಿಂದರ್ ಸಿಂಗ್, ಸರ್ದಾರ್ ರಾಜೇಂದ್ರ ಸಿಂಗ್, ಸರ್ದಾರ್ ಚರಣಸಿಂಗ್, ಅನೀಲ್ ಗೌಡ, ರಾಜಕುಮಾರ ಪಾಟೀಲ್, ಸಾಯಿಕುಮಾರ ಪಾಟೀಲ್, ಅಲಿ
ಉಮೇಶ ಪಾಂಡರೆ, ಸೂರ್ಯಕಾಂತ, ಪುಷ್ಪಕಕುಮಾರ ಜಾಧವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.