ಬೀದರ್: ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ನಗರದ ಮಹಾಲಕ್ಷ್ಮಿ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಸಂಜೆ ನುಡಿ ನಮನ ಸಲ್ಲಿಸಲಾಯಿತು.
ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ಎಸ್.ಎಲ್. ಭೈರಪ್ಪ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಅನನ್ಯ. ಅವರ ಕನ್ನಡಾಭಿಮಾನ ಅನುಕರಣೀಯ. ಎಲ್ಲರೂ ದೈನಂದಿನ ಜೀವನದಲ್ಲಿ ಸಂಪೂರ್ಣ ಕನ್ನಡ ಬಳಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.
ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕ ಕೆ. ಸತ್ಯಮೂರ್ತಿ ಮಾತನಾಡಿ, ಭಾರತೀಯ ಸಂಸ್ಕೃತಿ ಹಾಗೂ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ತಮ್ಮ ಲೇಖನಿ ಮೂಲಕ ವಿಶ್ವಕ್ಕೆ ತೋರಿದವರು ಭೈರಪ್ಪ ಅವರು ಎಂದು ಹೇಳಿದರು.
ಭಾರತೀಯ ಇತಿಹಾಸ ಸಂಕಲನ ಸಮಿತಿಯ ಬೀದರ್ ಘಟಕದ ಗೌರವ ಅಧ್ಯಕ್ಷ ಶಿವಕುಮಾರ ಉಪ್ಪೆ ಮಾತನಾಡಿ, ಭೈರಪ್ಪನವರು ಗಟ್ಟಿ ಸಾಹಿತಿಯಾಗಿದ್ದರು. ಯಾವುದೇ ವಿಷಯವಾದರೂ, ವಾಸ್ತವಾಂಶ ಅರಿತು, ಅದಕ್ಕೆ ಅಕ್ಷರದ ರೂಪ ನೀಡುತ್ತಿದ್ದರು ಎಂದು ತಿಳಿಸಿದರು.
ಪ್ರಮುಖರಾದ ರಾಮಕೃಷ್ಣನ್ ಸಾಳೆ, ಮಂಗಲಾ ಭಾಗವತ್, ಜಯದೇವಿ ಯದಲಾಪುರೆ, ರಮೇಶ ಬಿರಾದಾರ, ಓಂಪ್ರಕಾಶ ದಡ್ಡೆ, ರುಕ್ಮೊದ್ದೀನ್ ಇಸ್ಲಾಂಪುರ, ಭಾರತೀಯ ಇತಿಹಾಸ ಸಂಕಲನ ಸಮಿತಿಯ ಬೀದರ್ ಘಟಕದ ಅಧ್ಯಕ್ಷ ಪೃಥ್ವಿರಾಜ್ ಹಾಲಪ್ಪಗೋಳ್, ಸಂಜೀವಕುಮಾರ ತಾಂದಳೆ, ನಾಗರಾಜ ಕರ್ಪೂರ, ಬಸಯ್ಯ ಸ್ವಾಮಿ, ಶ್ರೀಕಾಂತ ಬಿರಾದಾರ, ಬಸವರಾಜ ಬಿರಾದಾರ, ಶ್ರೀದೇವಿ ಸೋಮಶೆಟ್ಟಿ, ಭಗವಾನ ಅಣ್ಣೆಪ್ಪನೋರ, ಬಸವರಾಜ ಮೂಲಗೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.