ಬಸವಕಲ್ಯಾಣ: ತಾಲ್ಲೂಕಿನ ಲಾಡವಂತಿ ಗ್ರಾಮದಲ್ಲಿ ಸೋಮವಾರ ರಾತ್ರಿ ಕೆಲ ಯುವಕರು ಮಹಾರಾಷ್ಟ್ರದ ಉಮರ್ಗಾ ಘಟಕ ಬಸ್‌ವೊಂದರ ಮುಂದಿನ ಗಾಜುಗಳಿಗೆ ಕಲ್ಲೆಸೆದು ಒಡೆದು ಪರಾರಿಯಾಗಿದ್ದಾರೆ.
ನಿತ್ಯ ಉಮರ್ಗಾದಿಂದ ಪಟ್ಟಣಕ್ಕೆ ಈ ಬಸ್ ಬಂದು ಹೋಗುತ್ತದೆ.
ಚಾಲಕ ಮತ್ತು ನಿರ್ವಾಹಕರು ಬಸ್ ನಿಲ್ಲಿಸಿ ಮಲಗಿದ್ದಾಗ ಮಧ್ಯರಾತ್ರಿ ಬೈಕ್ ಮೇಲೆ ಬಂದಿದ್ದ ಕಿಡಿಗೇಡಿಗಳು ಗಾಜು ಒಡೆದಿದ್ದಾರೆ. ಈ ದೃಶ್ಯ ಸಮೀಪದ ಗ್ರಾಮ ಪಂಚಾಯಿತಿ ಕಚೇರಿಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಮಂಠಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಸುವರ್ಣಾ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.