ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಮನ್ನಳ್ಳಿ ಮುಖ್ಯರಸ್ತೆಯಲ್ಲಿ ಬೆಳಗಿದ ವಿದ್ಯುತ್ ದೀಪಗಳು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 13:01 IST
Last Updated 23 ಫೆಬ್ರುವರಿ 2026, 13:01 IST
   

ಬೀದರ್‌: ನಗರದ ಮನ್ನಳ್ಳಿ ರಸ್ತೆಯುದ್ದಕ್ಕೂ ಹೊಸದಾಗಿ ಅಳವಡಿಸಿರುವ ವಿದ್ಯುತ್‌ ಕಂಬಗಳಲ್ಲಿ ಕೊನೆಗೂ ದೀಪಗಳು ಬೆಳಗಿವೆ.

‘ಮುಖ್ಯರಸ್ತೆಯಲ್ಲಿ ಬೆಳಗದ ವಿದ್ಯುತ್‌ ದೀಪಗಳು’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಫೆಬ್ರುವರಿ 3ರಂದು ವರದಿ ಪ್ರಕಟಿಸಿತ್ತು.

ನಗರದ ಮನ್ನಳ್ಳಿ ಮುಖ್ಯರಸ್ತೆಯ ಚಿಟ್ಟಾ ಕ್ರಾಸ್‌ನಿಂದ ಕುಂಬಾರವಾಡ ಕ್ರಾಸ್‌ ವರೆಗೆ ಸಂಪರ್ಕ ಕಲ್ಪಿಸಲಾಗಿದ್ದು, ವಿದ್ಯುತ್‌ ದೀಪಗಳು ಝಗಮಗಿಸುತ್ತಿವೆ. ಹಂತ ಹಂತವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ದೀಪಗಳು ಉರಿಯಲಿವೆ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಕೆಕೆಆರ್‌ಡಿಬಿ ಅನುದಾನದಡಿ ನಗರದ ಪ್ರಮುಖ ರಸ್ತೆಗಳಲ್ಲಿ ಹೊಸದಾಗಿ ವಿದ್ಯುತ್‌ ಕಂಬಗಳನ್ನು ಅಳವಡಿಸಲಾಗಿದೆ. ಆದರೆ, ಮೂರು ತಿಂಗಳು ಕಳೆದರೂ ವಿದ್ಯುತ್‌ ದೀಪಗಳು ಬೆಳಗದ ಕಾರಣ ಅಂಧಕಾರ ಆವರಿಸಿಕೊಂಡಿದೆ ಎಂದು ‘ಪ್ರಜಾವಾಣಿ’ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ನಿರ್ಮಿತಿ ಕೇಂದ್ರ ಹಾಗೂ ಮಹಾನಗರ ಪಾಲಿಕೆ, ಎಲ್ಲೆಡೆ ‌ಕಂಬಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೆಲಸ ಕೈಗೆತ್ತಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.