ADVERTISEMENT

ಶಿಕ್ಷಣದಲ್ಲಿ ಭಾರತೀಯತೆಗೆ ಶ್ರಮಿಸಿ: ಡಾ. ಪಲ್ಲವಿ ಪಾಟೀಲ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 13:11 IST
Last Updated 19 ಆಗಸ್ಟ್ 2021, 13:11 IST
ಬೀದರ್‍ನ ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಕಚೇರಿಯಲ್ಲಿ ನಡೆದ ಶೈಕ್ಷಣಿಕ ಚಿಂತನ ಗೋಷ್ಠಿಯಲ್ಲಿ ಭಾರತೀಯ ಶಿಕ್ಷಣ ಮಂಡಲದ ಕಲಬುರ್ಗಿ ವಿಭಾಗ ಪ್ರಮುಖರಾದ ಡಾ.ಪಲ್ಲವಿ ಪಾಟೀಲ ಮಾತನಾಡಿದರು. ಪ್ರತಿಭಾ ಚಾಮಾ, ಹನುಮಂತರಾವ್ ಪಾಟೀಲ, ನಾಗೇಶ, ಮಲ್ಲಿಕಾರ್ಜುನ ಮಠಪತಿ ಇದ್ದರು

ಬೀದರ್: ಶಿಕ್ಷಣದಲ್ಲಿ ಭಾರತೀಯತೆ ಕಾರ್ಯರೂಪಕ್ಕೆ ತರುವ ದಿಸೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದು ಭಾರತೀಯ ಶಿಕ್ಷಣ ಮಂಡಲದ ಕಲಬುರ್ಗಿ ವಿಭಾಗ ಪ್ರಮುಖರಾದ ಡಾ. ಪಲ್ಲವಿ ಪಾಟೀಲ ಹೇಳಿದರು.

ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಕಚೇರಿಯಲ್ಲಿ ಆಯೋಜಿಸಿದ್ದ ಸದಸ್ಯತ್ವ ಪೂರ್ವಭಾವಿ ಸಭೆ ಹಾಗೂ ಶೈಕ್ಷಣಿಕ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ತಿಳಿಸಿದರು.

ADVERTISEMENT

ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಕಾರ್ಯದರ್ಶಿ ಹನುಮಂತರಾವ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗೇಶ, ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾ ಘಟಕದ ಪ್ರಮುಖರಾದ ಪ್ರತಿಭಾ ಚಾಮಾ, ಸಂಯೋಜಕ ಮಲ್ಲಿನಾಥ ಮಠಪತಿ ಉಪಸ್ಥಿತರಿದ್ದರು.
ಬಾಲಾಜಿ ರಾಠೋಡ್ ನಿರೂಪಿಸಿದರು. ಅರ್ಚನಾ ಸಿರಿಗೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.