ADVERTISEMENT

ಬೀದರ್: ದಿಢೀರ್‌ ಕುಸಿದ ಈರುಳ್ಳಿ ಬೆಲೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 14:38 IST
Last Updated 12 ಮಾರ್ಚ್ 2021, 14:38 IST
ಬೀದರ್‌ನ ಜನವಾಡ ರಸ್ತೆ ಬದಿಯ ತರಕಾರಿ ಅಂಗಡಿಯಲ್ಲಿ ಮಾರಾಟಕ್ಕೆ ಇಡಲಾದ ಈರುಳ್ಳಿ
ಬೀದರ್‌ನ ಜನವಾಡ ರಸ್ತೆ ಬದಿಯ ತರಕಾರಿ ಅಂಗಡಿಯಲ್ಲಿ ಮಾರಾಟಕ್ಕೆ ಇಡಲಾದ ಈರುಳ್ಳಿ   

ಬೀದರ್: ಜಿಲ್ಲೆಯ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಢೀರ್‌ ಕುಸಿದಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಆತಂಕದಲ್ಲಿರುವ ಗ್ರಾಹಕ ಸಂತಸ ಪಟ್ಟರೆ, ರೈತರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.

ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1,500 ರಿಂದ ₹1,600 ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹20ಗೆ ಮಾರಾಟ ವಾಗುತ್ತಿದೆ. ಎರಡು ವಾರಗಳ ಹಿಂದೆ ಬೆಲೆ ಕೆ.ಜಿಗೆ ₹50, ನಾಲ್ಕು ದಿನಗಳ ಹಿಂದೆ ₹35 ಹಾಗೂ ಶುಕ್ರವಾರ ₹ 20ಕ್ಕೆ ಕುಸಿದಿದೆ.

ಮಹಾರಾಷ್ಟ್ರದ ನಾಸಿಕ್ ಹಾಗೂ ಜಾಲನಾ ಜಿಲ್ಲೆಗಳಿಂದ ಈರುಳ್ಳಿ ಬೀದರ್‌ ಜಿಲ್ಲೆಗೆ ಆವಕವಾಗುತ್ತದೆ. ಈ ಬಾರಿ ಸ್ಥಳೀಯವಾಗಿಯೂ ಈರುಳ್ಳಿ ಬೆಳೆಯಲಾಗಿದೆ. ಉತ್ಪಾದನೆಯೂ ಹೆಚ್ಚಾಗಿರುವ ಕಾರಣ ಬೆಲೆ ಕುಸಿದಿದೆ ಎಂದು ಈರುಳ್ಳಿ ವ್ಯಾಪಾರಿ ಮಕ್ಬೂಲ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.