ADVERTISEMENT

ಸುಂದಾಳ ಗ್ರಾ.ಪಂ: ಪ್ರಿಯಾಂಕಾ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 2:47 IST
Last Updated 30 ಜೂನ್ 2022, 2:47 IST
ಔರಾದ್ ತಾಲ್ಲೂಕಿನ ಸುಂದಾಳ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆ ಪ್ರಿಯಾಂಕ ಪಾಟೀಲ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು
ಔರಾದ್ ತಾಲ್ಲೂಕಿನ ಸುಂದಾಳ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆ ಪ್ರಿಯಾಂಕ ಪಾಟೀಲ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು   

ಔರಾದ್: ತಾಲ್ಲೂಕಿನ ಸುಂದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಬಿ.ಇಡಿ ಪದವೀಧರರೊಬ್ಬರು ಅಲಂಕರಿಸಿದ್ದಾರೆ.

ಜಕನಾಳ ಗ್ರಾಮದ ಪ್ರಿಯಾಂಕಾ ರಾವುಸಾಬ್ ಪಾಟೀಲ ಮಂಗಳವಾರ ನಡೆದ ಚುನಾವಣೆಯಲ್ಲಿ 20 ಸದಸ್ಯರ ಪೈಕಿ 12 ಸದಸ್ಯರ ಬೆಂಬಲ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಪ್ರತಿಸ್ಪರ್ಧಿ ರಾಚಮ್ಮ ಶೆಟಕಾರ ಏಳು ಸದಸ್ಯರ ಬೆಂಬಲ ಪಡೆದರೆ ಒಂದು ಮತ ಅಸಿಂಧುಗೊಂಡಿದೆ. ತಾಲ್ಲೂಕು ಪಂಚಾಯಿತಿ ಇಒ ಬೀರೇಂದ್ರಸಿಂಗ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.

ಸುಂದಾಳ ಗ್ರಾಮ ಪಂಚಾಯಿತಿಯ ಈ ಹಿಂದಿನ ಅಧ್ಯಕ್ಷೆ ಶ್ರೀದೇವಿ ರಾಜೀನಾಮೆ ಕೊಟ್ಟಿರುವುದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದೆ. ಈಗ ಆಯ್ಕೆಯಾದ ನೂತನ ಅಧ್ಯಕ್ಷೆ ಪ್ರಿಯಾಂಕಾ ಅವರ ಅಧಿಕಾರಾವಧಿ 15 ತಿಂಗಳ ಇರಲಿದೆ.

ADVERTISEMENT

‘ಸದಸ್ಯರು ನಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಿದ್ದಾರೆ. ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ನಾನು ಪದವೀಧರೆ ಆಗಿರುವುದರಿಂದ ಆಡಳಿತದಲ್ಲೂ ಸ್ವಲ್ಪ ತಿಳವಳಿಕೆ ಇದೆ. ಹೀಗಾಗಿ ಗ್ರಾಮಗಳ ಮೂಲ ಸೌಲಭ್ಯ ಸೇರಿ ಅಗತ್ಯ ಕೆಲಸ–ಕಾರ್ಯಗಳನ್ನು ಆದ್ಯತೆ ಮೇಲೆ ಮಾಡುವುದಾಗಿ’ ನೂತನ ಅಧ್ಯಕ್ಷೆ ಪ್ರಿಯಾಂಕ ಹೇಳಿದರು.

ದೇವರಿಗೆ ಪೂಜೆ: ಬಿಜೆಪಿ ಕಾರ್ಯಕರ್ತರು ನೂತನ ಅಧ್ಯಕ್ಷರೊಂದಿಗೆ ಗ್ರಾಮದ ವೀರಭದ್ರೇಶ್ವರ ದೇವಸ್ಥಾನಕ್ಕೆ ತರಳಿ ಪೂಜೆ ಸಲ್ಲಿಸಿದರು. ರಾವುಸಾಬ್ ಪಾಟೀಲ, ದಯಾನಂದ ಹಳ್ಳಿಖೇಡೆ, ಶರಣಬಸಪ್ಪ ಪಾಟೀಲ, ಬಾಬುರಾವ ಸಿಂಗೋಡೆ, ರವೀಂದ್ರರೆಡ್ಡಿ, ಮಾರುತಿರೆಡ್ಡಿ, ಗುರುನಾಥ ಲಕ್ಕಾ, ಗುರುನಾಥ ಪಾಟೀಲ, ಜಗದೀಶ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.