ಬೀದರ್: ತೆರಿಗೆ ಹಣ ದುರುಪಯೋಗ ಮಾಡಿದ ಹಾಗೂ ಬೀದರ್ ನಗರಸಭೆಗೆ ನಷ್ಟ ಉಂಟು ಮಾಡಿದ ಆರೋಪದ ಮೇಲೆ ನಾಲ್ವರನ್ನು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅಮಾನತುಗೊಳಿಸಿದ್ದಾರೆ.
₹ 3,85,118 ತೆರಿಗೆ ಹಣ ದುರಪಯೋಗ ಮಾಡಿದ ಬೀದರ್ ನಗರಸಭೆ ಕಂದಾಯ ವಿಭಾಗದ ದ್ವಿತೀಯ ದರ್ಜೆ ಸಹಾಯಕ ಬಸವರಾಜ ಬೋರೆ, ತೆರಿಗೆ ವಸೂಲಿದಾರ ಮೆಹಬೂಬಸಾಬ್, ಪ್ರಭಾರಿ ತೆರಿಗೆ ವಸೂಲಿದಾರ ನಾಸಿರ್ ಖಾನ್ ಹಾಗೂ ಸದ್ಯ ಔರಾದ್ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತೆರಿಗೆ ವಸೂಲಿದಾರ ಲೋಕೇಶ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಲೆಕ್ಕ ಪರಿಶೀಲನೆ ಸಂದರ್ಭದಲ್ಲಿ ನಗರಸಭೆ ಹಾಗೂ ಬ್ಯಾಂಕ್ ಲೆಕ್ಕದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ನಗರಸಭೆ ನಾಲ್ವರು ಸಿಬ್ಬಂದಿ ಹಣ ಕಬಳಿಸಿರುವುದು ಬೆಳಕಿಗೆ ಬಂದಿತ್ತು. ನಗರಸಭೆ ಆಯುಕ್ತರು ಶಿಸ್ತುಕ್ರಮಕ್ಕೆ ಜಿಲ್ಲಾಧಿಕಾರಿಗೆ ಪತ್ರಬರೆದಿದ್ದರು. ನ್ಯೂಟೌನ್ ಪೊಲೀಸರ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.