ಕಮಲನಗರ: ತಾಲ್ಲೂಕಿನ ದಾಬಕಾ ಗ್ರಾಮದಲ್ಲಿ ಗ್ರಾ.ಪಂ.ವತಿಯಿಂದ ನಿರ್ಮಿಸಲಾದ ಕೆರೆ ಒಡ್ಡಿನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬುಧವಾರ ತಹಶೀಲ್ದಾರ ಅಮೀತಕುಮಾರ ಕುಲಕರ್ಣಿ ಅವರ ನೇತೃತ್ವದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಣ್ಣ ಕೆರೆ ಒಡ್ಡಿನಲ್ಲಿ ಎರಡು ಕಡೆ ಭಾರಿ ಗಾತ್ರದ ಬಿರುಕು ಕಾಣಿಸಿಕೊಂಡಿವೆ. ಅಲ್ಲದೆ ಬಿರುಕು ದೊಡ್ಡ ಪ್ರಮಾಣದಲ್ಲಿ ಆಗಿರುವುದರಿಂದ ಕೆರೆ ಒಡೆಯುವ ಭೀತಿ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಂಚಾಯತ್ ರಾಜ ಇಂಜಿನಿಯರಿಂಗ್ ಇಲಾಖೆ ಎಈಈ ಸುನೀಲ ಚಿಲ್ಲರ್ಗೆ, ತಾ.ಪಂ.ಇಒ ಹಣಮಂತರಾಯ ಕೌಟಗೆ, ಪಿಡಿಒ ಬಾಲಾಜಿ ಬಿರಾದಾರ, ಕಂದಾಯ ನಿರೀಕ್ಷಕ ಸಂಜೀವಕುಮಾರ ರಾಠೋಡ ಮತ್ತು ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.