ADVERTISEMENT

ಮಕ್ಕಳ ಕಲಿಕೆ ಚೇತರಿಕೆ ಅಗತ್ಯ; ವಿಜಯಕುಮಾರ

​ಪ್ರಜಾವಾಣಿ ವಾರ್ತೆ
Published 5 ಮೇ 2022, 2:59 IST
Last Updated 5 ಮೇ 2022, 2:59 IST
ಬೀದರ್‌ನ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಆಯೋಜಿಸಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಕಲಿಕಾ ಚೇತರಿಕೆ ಉಪಕ್ರಮ ತರಬೇತಿ ಶಿಬಿರವನ್ನು ಡಯಟ್‍ನ ಹಿರಿಯ ಉಪನ್ಯಾಸಕ ಡಾ. ಮಹಮ್ಮದ್ ಗುಲ್ಶನ್ ಸಸಿಗೆ ನೀರೆರೆದು ಉದ್ಘಾಟಿಸಿದರು. ವಿಜಯಕುಮಾರ ಬೆಳಮಗಿ, ಪರಮೇಶ್ವರ ಬಿರಾದಾರ, ರಾಜು ಸಾಗರ್, ಸುನೀಲ್ ಗಾಯಕವಾಡ್, ಮಂಜುನಾಥ ಇದ್ದರು
ಬೀದರ್‌ನ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಆಯೋಜಿಸಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಕಲಿಕಾ ಚೇತರಿಕೆ ಉಪಕ್ರಮ ತರಬೇತಿ ಶಿಬಿರವನ್ನು ಡಯಟ್‍ನ ಹಿರಿಯ ಉಪನ್ಯಾಸಕ ಡಾ. ಮಹಮ್ಮದ್ ಗುಲ್ಶನ್ ಸಸಿಗೆ ನೀರೆರೆದು ಉದ್ಘಾಟಿಸಿದರು. ವಿಜಯಕುಮಾರ ಬೆಳಮಗಿ, ಪರಮೇಶ್ವರ ಬಿರಾದಾರ, ರಾಜು ಸಾಗರ್, ಸುನೀಲ್ ಗಾಯಕವಾಡ್, ಮಂಜುನಾಥ ಇದ್ದರು   

ಬೀದರ್: ಮಕ್ಕಳ ಕಲಿಕೆ ಚೇತರಿಕೆ ಮಾಡಬೇಕಾದ ಅಗತ್ಯ ಇದೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಬೆಳಮಗಿ ಹೇಳಿದರು.

ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ವಿದ್ಯಾನಗರ ಕಾಲೊನಿಯ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯೋಜಿಸಿದ ಎಂಟು ದಿನಗಳ ಕಲಿಕಾ ಚೇತರಿಕೆ ಉಪಕ್ರಮ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ವೇಳೆ ಮಕ್ಕಳ ಕಲಿಕೆ ಮೇಲೆ ಸಾಕಷ್ಟು ಪ್ರಭಾವ ಉಂಟಾಗಿತ್ತು. ಹೀಗಾಗಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ಕೊಡಬೇಕಾಗಿದೆ ಎಂದರು.

ADVERTISEMENT

ಕಲಿಕಾ ಚೇತರಿಕೆ ದಿಸೆಯಲ್ಲಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಲು 1ರಿಂದ 9ನೇ ತರಗತಿಯ ಶಿಕ್ಷಕರಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶಿಬಿರ ಉದ್ಘಾಟಿಸಿದ ಡಯಟ್ ಹಿರಿಯ ಉಪನ್ಯಾಸಕ ಡಾ.ಮಹಮ್ಮದ್ ಗುಲ್ಶನ್ ಮಾತನಾಡಿ, ಮಕ್ಕಳು ಸರಳ ಹಾಗೂ ಸುಲಭವಾಗಿ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಶಿಕ್ಷಕರು ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರು ತಮ್ಮ ಬೋಧನಾ ಕೌಶಲವನ್ನು ಇನ್ನಷ್ಟು ವೃದ್ಧಿಸಿಕೊಳ್ಳಬೇಕು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸಂಘ ಸದಾ ಸಿದ್ಧ ಇದೆ ಎಂದು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಸಾಗರ್ ಹೇಳಿದರು.

ಜೀಜಾಮಾತಾ ಕನ್ಯಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ ಇದ್ದರು. ಸಿಆರ್‌ಪಿ ಸುನೀಲ್ ಗಾಯಕವಾಡ್ ನಿರೂಪಿಸಿದರು. ಬಿ.ಆರ್.ಪಿ. ಮಂಜುನಾಥ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.