ADVERTISEMENT

ಬೀದರ್: ವಿವಿಧೆಡೆ ಶಿಕ್ಷಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 13:06 IST
Last Updated 6 ಸೆಪ್ಟೆಂಬರ್ 2022, 13:06 IST
ಬೀದರ್‌ನ ಸಮತಾ ಪ್ರೌಢ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಬೀದರ್‌ನ ಸಮತಾ ಪ್ರೌಢ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಬೀದರ್: ಜಿಲ್ಲೆಯ ವಿವಿಧೆಡೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನ ಆಚರಿಸಲಾಯಿತು.

ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತು, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಡಾ.ಕೇರ್ ಚಾರಿಟಬಲ್ ಟ್ರಸ್ಟ್, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ, ನ್ಯೂ ಮದರ್ ತೆರೇಸಾ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ನಗರದ ಸಮತಾ ಪ್ರೌಢ ಶಾಲೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ ಆಚರಿಸಲಾಯಿತು.

ಸಾಹಿತಿ ಎಂ.ಜಿ.ದೇಶಪಾಂಡೆ, ಪತ್ರಕರ್ತ ಮಹಾರುದ್ರ ಡಾಕುಳಗಿ, ಡಾ.ಕೇರ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ. ಸಿ. ಆನಂದರಾವ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಪ್ರಶಾಂತ ರಾಗಾ, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷ ಅರವಿಂದ ಕುಲಕರ್ಣಿ ಮಾತನಾಡಿದರು. ಸಮತಾ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಬಳಿರಾಮ ಕುರನಾಳೆ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ನ್ಯೂ ಮದರ್ ತೆರೇಸಾ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಂಜೀವಕುಮಾರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಗದೇವಿ ಭೋಸ್ಲೆ, ವಿಜಯಲಕ್ಷ್ಮಿ, ನಸೀಮ್ ಸುಲ್ತಾನಾ, ಕರೀಮಾ ಸಿದ್ಧಿಕಿ, ಅನ್ನಪೂರ್ಣ, ಬಾಲಾಜಿ, ಉಮೇಶ ದುಬಲಗುಂಡಿ, ಕಲಾವತಿ, ಶಾಲಿನಿ, ಅನಿತಾ, ಸುನೀತಾ, ರೂಬಿನ್ ಅಂಜುಮ್, ಬಸವರಾಜ ಬುಯ್ಯಾ, ಸಂಜೀವಕುಮಾರ ಸ್ವಾಮಿ, ಪ್ರಶಾಂತ ರಾಗಾ, ವೈಜಿನಾಥ ಸಾಳೆ, ಅಂತೆಪ್ಪ ಬಿರಾದಾರ, ಮಂಜುನಾಥ ಬೆಳಕೇರಿ ಹಾಗೂ ನವೀನಕುಮಾರ ಅವರನ್ನು ಸನ್ಮಾನಿಸಲಾಯಿತು.

ಕೆ.ಕೆ ಪದವಿ ಕಾಲೇಜು:ಬೀದರ್: ನಗರದ ಕವಿರತ್ನ ಕಾಳಿದಾಸ ಪದವಿ ಕಾಲೇಜಿನಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು.

ಆರ್.ಆರ್.ಕೆ. ಕಾಲೇಜಿನ ಉಪನ್ಯಾಸಕ ರವಿಕಾಂತ ಬಿರಾದಾರ ಉದ್ಘಾಟಿಸಿದರು. ಉಪನ್ಯಾಸಕ ಶ್ರೀನಿವಾಸ ಬಂಡಿ ಅಧ್ಯಕ್ಷತೆ ವಹಿಸಿದ್ದರು.

ಎನ್.ಎಸ್.ಎಸ್. ಅಧಿಕಾರಿ ಗೋವಿಂದ ಮೋತಿರಾಮ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನಿರ್ದೇಶಕ ಓಂಕಾರ ಮಾಶೆಟ್ಟಿ ನಿರೂಪಿಸಿದರು. ಗ್ರಂಥಪಾಲಕ ವೈಜಿನಾಥ ಗೌಡನಗುರು ವಂದಿಸಿದರು.

ಲಿಟ್ಲ್ ಫ್ಲಾವರ್ ಶಾಲೆ:ಬೀದರ್: ತಾಲ್ಲೂಕಿನ ಯಾಕತಪುರದ ಲಿಟ್ಲ್ ಫ್ಲಾವರ್ ಇಂಗ್ಲಿಷ್‌ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಅತಿಥಿಗಳಾಗಿ ವಿಷಯ ಪರಿವೀಕ್ಷಕ ಸೈಯದ್ ಫುರಖಾನ್, ಶಫಿಯೋದ್ದಿನ್ ರೋಷನ್ ಆಗಮಿಸಿದ್ದರು. ಸಂಸ್ಥೆ ಅಧ್ಯಕ್ಷ ಸೈಯದ್ ಅಹ್ಮದ್ ಮುದ್ದೆ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಶಿಕ್ಷಕರಾದ ಶರಣಪ್ಪ ಜಾಲೆ, ಚಾಂದ್ ಪಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.