ಹುಲಸೂರ: ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಇಂಥ ವೃತ್ತಿಯಲ್ಲಿ ಹಲವು ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕ ಗದಗಯ್ಯ ಮಠಪತಿ ಬದುಕು ಸುಖಮಯವಾಗಿರಲಿ’ ಎಂದು ಸಾಯಗಾಂವನ ಶಿವಾನಂದ ಸ್ವಾಮೀಜಿ ಶುಭ ಹಾರೈಸಿದರು.
ಪಟ್ಟಣದ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ಶುಕ್ರವಾರ ನಡೆದ ಜೆ.ಬಿ.ಕೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಗದಗಯ್ಯ ಮಠಪತಿ ಅವರ ಹುದ್ದೆಯ ನಿವೃತ್ತಿ ಸಮಾರಂಭದಲ್ಲಿ ಮಾತನಾಡಿದರು.
‘ನಿಮ್ಮ ಕೈಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡಿ ಸಮಾಜದಲ್ಲಿ ಉತ್ತಮ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಪ್ರಾಥಮಿಕ ಶಾಲೆಯಲ್ಲಿ ನೀವು ಕಲಿಸಿದ ಮೌಲ್ಯ, ಕಲಿಸಿದ ಪಾಠವನ್ನು ಜೀವನ ಪರ್ಯಂತ ಮರೆಯುವುದಿಲ್ಲ’ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಲ್ಲಪ್ಪಾ ಧಬಾಲೆ, ಜೇಬಿಕೆ ಶಾಲಾ ಸಂಸ್ಥೆಯ ನಿರ್ದೇಶಕ ಬಾಬುರಾವ್ ಗೌಡಗಾವೆ ಮಾತನಾಡಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಲತಾ ಹಾರಕೂಡೆ, ಸರ್ಕಾರಿ ನ್ಯಾಯವಾದಿ ಬಾಲಾಜಿ ಅದೆಪ್ಪ ಸೇರಿ ಮಕ್ಕಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು. ಶಾಲಾ ಮಕ್ಕಳು ನೃತ್ಯ ಪ್ರದರ್ಶನ ಮಾಡಿದರು.
ಶಿವಲಿಂಗಯ್ಯ ಸ್ವಾಮಿ ಕನ್ನಡೆ, ವಿಶ್ವನಾಥ್ ಕಾಡಾದಿ, ಬಾಬುರಾವ್ ಮಾಲೋದೆ, ಗೋವಿಂದರಾವ್ ಸೋಮಾಂಶೀ ಸೇರಿ ಹಲವರು ಉಪಸ್ಥಿತರಿದ್ದರು. ರಾಜಕುಮಾರ ನೀಡೋದೆ ಸ್ವಾಗತಿಸಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.