ADVERTISEMENT

ಬೀದರ್ | ಮತ್ತೆ ಹತ್ತು ಮಂದಿಗೆ ಕೋವಿಡ್‌–19 ಸೋಂಕು ದೃಢ 

ಮಹಾರಾಷ್ಟ್ರದಿಂದ ಬಂದವರಿಂದ ಹೆಚ್ಚುತ್ತಿರುವ ಸೋಂಕು

​ಪ್ರಜಾವಾಣಿ ವಾರ್ತೆ
Published 26 ಮೇ 2020, 8:46 IST
Last Updated 26 ಮೇ 2020, 8:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀದರ್: ಜಿಲ್ಲೆಯಲ್ಲಿ ಮಂಗಳವಾರ ಮೂವರು ಮಹಿಳೆಯರು ಸೇರಿ ಒಟ್ಟು 10 ಜನರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 95ಕ್ಕೆ ಏರಿದೆ.

ಮುಂಬೈದಿಂದ ಬಂದು ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ 11 ದಿನಗಳಿಂದ ಕ್ವಾರಂಟೈನ್ ನಲ್ಲಿದ್ದ 16 ವರ್ಷದ ಬಾಲಕ, 55, 42, 37 ವರ್ಷದ ಮಹಿಳೆಯರು, 58, 43, 28, 23, 34 ಹಾಗೂ 43 ವರ್ಷದ ಪುರುಷರಿಗೆ ಕೋವಿಡ್ 19 ಸೊಂಕು ದೃಢಪಟ್ಟಿದೆ.

ಎಲ್ಲರನ್ನೂ ಸೋಮವಾರ ಸಂಜೆ ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆಯ ವಿಶೇಷ ನಿಗಾ ಘಟಕದಲ್ಲಿ ಇಡಲಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಇನ್ನೂ 100 ಜನರು ಇದ್ದಾರೆ. ಎರಡು ಕುಟುಂಬಗಳ ಸದಸ್ಯರಿಗೆ ಸೋಂಕು ತಗುಲಿದೆ. ಒಂದು ಕುಟುಂಬದ ತಾಯಿ, ಮಗ, ಮಗಳಿಗೆ,
ಇನ್ನೊಂದು ಕುಟುಂಬದಲ್ಲಿ ತಂದೆ, ತಾಯಿ ಹಾಗೂ ಮಗನಿಗೆ ಸೋಂಕು ಇರುವುದು ಖಚಿತವಾಗಿದೆ.

ADVERTISEMENT

ಮುಂಬೈನಿಂದ ಬಂದವರಿಗೇ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಗ್ರಾಮಸ್ಥರು ಆತಂಕಗೊಂಡು ಗ್ರಾಮದ ಅಂಗಡಿ ಬಾಗಿಲುಗಳನ್ನು ಮುಚ್ಚಿದ್ದು, ಮನೆಗಳಿಂದ ಹೊರಗೆ ಬರಲು ಹಿಂಜರಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.