ಖಟಕಚಿಂಚೋಳಿ: ಭಾಲ್ಕಿ ತಾಲ್ಲೂಕಿನ ನೆಲವಾಡ್ ಗ್ರಾಮದಲ್ಲಿ ಮಂಗಳವಾರ ಸಂಜೆ ವಿದ್ಯುತ್ ತಂತಿ ತುಳಿದು ಅಂಕುಶ ದಿಗಂಬರ್ ವಿರೋಜಿ (28) ಮೃತಪಟ್ಟಿದ್ದಾರೆ.
ಬಿರುಗಾಳಿ ಮಿಶ್ರಿತ ಮಳೆ ಸುರಿದ ಕಾರಣ ಗ್ರಾಮದಲ್ಲಿನ ವಿದ್ಯುತ್ ಕಂಬದ ತಂತಿ ಕಡಿದಿದೆ. ಹೊಲದಿಂದ ಬರುತ್ತಿದ್ದ ಈ ಯುವಕ ಕಡಿದ ತಂತಿ ಮೇಲೆ ಕಾಲಿಟ್ಟ ಕಾರಣ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಖಟಕಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.