ADVERTISEMENT

‘ಗಡಿಯಲ್ಲಿ ಪಟ್ಟದ್ದೇವರ ಸೇವೆ ಅವಿಸ್ಮರಣೀಯ’

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 15:43 IST
Last Updated 31 ಜುಲೈ 2024, 15:43 IST
ಚಿತ್ರ ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಮಹಾರಾಷ್ಟ್ರ ರಾಜ್ಯದ ಯುವ ಮತ್ತು ಕ್ರೀಡಾ ಕಲ್ಯಾಣ ಸಚಿವ ಸಂಜಯ ಬನಸೋಡೆ ಅವರನ್ನು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸನ್ಮಾನಿಸಿದರು
ಚಿತ್ರ ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಮಹಾರಾಷ್ಟ್ರ ರಾಜ್ಯದ ಯುವ ಮತ್ತು ಕ್ರೀಡಾ ಕಲ್ಯಾಣ ಸಚಿವ ಸಂಜಯ ಬನಸೋಡೆ ಅವರನ್ನು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸನ್ಮಾನಿಸಿದರು   

ಪಟ್ಟದ್ದೇವರು ಮಹಾರಾಷ್ಟ್ರ ರಾಜ್ಯದಲ್ಲಿ ಬಸವತತ್ವ ಪ್ರಚಾರದ ಜತೆಗೆ ಮರಾಠಿ ಭಾಷೆಯಲ್ಲಿ ಸಾಹಿತ್ಯ ರಚಿಸಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಮಹಾರಾಷ್ಟ್ರದ ಜನರು ಇವರ ಸೇವೆ ಎಂದಿಗೂ ಮರೆಯುವುದಿಲ್ಲ. ಸಂಜಯ ಬನಸೋಡೆ, ಯುವ ಮತ್ತು ಕ್ರೀಡಾ ಕಲ್ಯಾಣ ಸಚಿವ ಮಹಾರಾಷ್ಟ್ರ

ಗಡಿಯಲ್ಲಿ ಪಟ್ಟದ್ದೇವರ ಸೇವೆ ಅವಿಸ್ಮರಣೀಯ: ಸಚಿವ ಬನಸೋಡೆ ಪ್ರಜಾವಾಣಿ ವಾರ್ತೆ ಭಾಲ್ಕಿ: ಗಡಿ ಭಾಗದಲ್ಲಿ ಬಸವಲಿಂಗ ಪಟ್ಟದ್ದೇವರು ಸಲ್ಲಿಸುತ್ತಿರುವ ಸಮಾಜ ಸೇವೆ ಅವಿಸ್ಮರಣೀಯವಾಗಿದೆ ಎಂದು ಮಹಾರಾಷ್ಟ್ರ ರಾಜ್ಯದ ಯುವ ಮತ್ತು ಕ್ರೀಡಾ ಕಲ್ಯಾಣ ಸಚಿವ ಸಂಜಯ ಬನಸೋಡೆ ಹೇಳಿದರು. ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠದ ವತಿಯಿಂದ ಬುಧವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಪಟ್ಟದ್ದೇವರು ಬಸವಣ್ಣನವರ ಅಪ್ಪಟ ಅನುಯಾಯಿ ಆಗಿದ್ದಾರೆ. ಬಸವತತ್ವವನ್ನು ಕರ್ನಾಟಕ ಅಷ್ಟೇ ಅಲ್ಲದೇ ಮಹಾರಾಷ್ಟ್ರ ರಾಜ್ಯದಲ್ಲಿ ಮರಾಠಿ ಭಾಷೆಯಲ್ಲಿ ಸಾಹಿತ್ಯ ರಚಿಸಿ ವ್ಯಾಪಕವಾಗಿ ಪ್ರಚಾರ, ಪ್ರಸಾರ ಮಾಡಿ ಮರಾಠಿ ಭಾಷಿಕರಲ್ಲಿ ಬಸವತತ್ವದ ಮಹತ್ವವನ್ನು ಸಾರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟದ್ದೇವರೊಂದಿಗೆ ಹಿಂದಿನಿಂದಲೂ ಆತ್ಮೀಯ ಒಡನಾಟ ಇದ್ದು ಮಹಾರಾಷ್ಟ್ರದ ವಿವಿಧೆಡೆ ಸಭೆ ಸಮಾರಂಭಗಲ್ಲಿಳ ಹಲವು ಬಾರಿ ಪಟ್ಟದ್ದೇವರ ಜತೆಗೆ ವೇದಿಕೆ ಹಂಚಿಕೊಂಡಿದ್ದೇನೆ. ಇವರ ಸೇವೆ ಬಗ್ಗೆ ತಿಳಿದು ಕೊಂಡಿದ್ದೇನೆ. ಆದರೆ ನೋಡಿರಲಿಲ್ಲ. ಈ ಭಾಗಕ್ಕೆ ಭೇಟಿ ನೀಡಿ ಸ್ವಾಮೀಜಿ ದರುಶನ ಪಡೆದಿರುವುದು ನನ್ನ ಸುದೈವ ಎಂದರು. ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ನ ಅಧ್ಯಕ್ಷ ನಾಡೋಜ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಮನುಷ್ಯನ ಎಲ್ಲ ಸಮಸ್ಯೆಗಳಿಗೂ ಬಸವತತ್ವದಲ್ಲಿ ಪರಿಹಾರ ಇದೆ. ಆ ಕಾರಣಕ್ಕಾಗಿಯೇ ಬಸವತತ್ವವನ್ನು ಜಗದಗಲ ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಉದಗೀರದ ಮುಖಂಡ ರಮೇಶ ಅಂಬರಖಾನೆ, ಮಲ್ಲಿಕಾರ್ಜುನ ಸ್ವಾಮಿ, ಚಂದ್ರಕಾಂತ ಪಾಟೀಲ, ಡಾ.ಪಟವಾರಿ, ಶಿವಾಜಿರಾವ್ ಕಾಳೆ, ನಾನಾಜಿ ಪವಾರ್, ಆಡಳಿತಾಧಿಕಾರಿ ಮೋಹನ ರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ. ಸಾಹಿತಿ ರಾಜು ಜುಬರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT