ADVERTISEMENT

ನೀರಿನ ಸಮಸ್ಯೆಗೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 4:42 IST
Last Updated 25 ಏಪ್ರಿಲ್ 2021, 4:42 IST
ಭಾಲ್ಕಿ ತಾಲ್ಲೂಕಿನ ಖಾನಾಪೂರ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿರುವ ಕೈಪಂಪು ದುರಸ್ಥಿ ಮಾಡಿಸುತ್ತಿರುವ ಪಿಡಿಒ ಶಿವಶೆಟ್ಟಿ ಸೀತಾ
ಭಾಲ್ಕಿ ತಾಲ್ಲೂಕಿನ ಖಾನಾಪೂರ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿರುವ ಕೈಪಂಪು ದುರಸ್ಥಿ ಮಾಡಿಸುತ್ತಿರುವ ಪಿಡಿಒ ಶಿವಶೆಟ್ಟಿ ಸೀತಾ   

ಭಾಲ್ಕಿ: ತಾಲ್ಲೂಕಿನ ಖಾನಾಪೂರ ಗ್ರಾಮದ ಸರ್ಕಾರಿ ಶಾಲೆ ಸಮೀಪದ ಓಣಿ ಜನರಿಗೆ ನೀರಿನ ಸೌಕರ್ಯ ಕಲ್ಪಿಸಲು ಶಾಲೆ ಆವರಣದಲ್ಲಿ ಹಾಳು ಬಿದ್ದಿದ್ದ ಕೈ ಪಂಪನ್ನು ದುರಸ್ಥಿ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ.

ಶಾಲೆ ಸಮೀಪದ ಓಣಿ ಜನರಿಗೆ ಆಗುತ್ತಿರುವ ನೀರಿನ ಸಮಸ್ಯೆ ಕುರಿತು ಬುಧವಾರ ‘ಖಾನಾಪೂರ: ಉಲ್ಬಣಿಸಿದ ನೀರಿನ ಸಮಸ್ಯೆ’ ಎಂಬ ಶೀರ್ಷಿಕೆ ಅಡಿಯಲ್ಲಿ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ವರದಿಗೆ ಸ್ಪಂದಿಸಿದ ಮಳಚಾಪೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಶೆಟ್ಟಿ ಸೀತಾ ಅವರು ಖುದ್ಧಾಗಿ ಸ್ಥಳಕ್ಕೆ ಭೇಟಿ ನೀಡಿ ಕೆಲಸಗಾರರ ಸಹಾಯದಿಂದ ಕೈ ಪಂಪನ್ನು ದುರಸ್ಥಿಗೊಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.