ADVERTISEMENT

ಬೀದರ್: ಕಲಾ ಪ್ರತಿಭೋತ್ಸವದಲ್ಲಿ ಕಲೆಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 15:19 IST
Last Updated 27 ಅಕ್ಟೋಬರ್ 2021, 15:19 IST
ಬೀದರ್‌ನ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಕಲಾ ಪ್ರತಿಭೋತ್ಸವವನ್ನು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಬಲಾ ಬಾರಿಸಿ ಉದ್ಘಾಟಿಸಿದರು. ಸಿದ್ರಾಮ ಸಿಂಧೆ, ದಿಲೀಪ್ ಕಾಡವಾದ, ಶಿವಶರಣಪ್ಪ ವಾಲಿ, ಶಕುಂತಲಾ ವಾಲಿ ಇದ್ದಾರೆ
ಬೀದರ್‌ನ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಕಲಾ ಪ್ರತಿಭೋತ್ಸವವನ್ನು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಬಲಾ ಬಾರಿಸಿ ಉದ್ಘಾಟಿಸಿದರು. ಸಿದ್ರಾಮ ಸಿಂಧೆ, ದಿಲೀಪ್ ಕಾಡವಾದ, ಶಿವಶರಣಪ್ಪ ವಾಲಿ, ಶಕುಂತಲಾ ವಾಲಿ ಇದ್ದಾರೆ   

ಬೀದರ್: ಕಾಡವಾದದ ಜೀವನ ಪ್ರಕಾಶ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕಲಾ ಪ್ರತಿಭೋತ್ಸವದಲ್ಲಿ ವಿವಿಧ ಕಲೆಗಳು ಅನಾವರಣಗೊಂಡವು.

ಅಂಗವಿಕಲ ಕಲಾವಿದರು ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ವಚನ ಗಾಯನ, ಜನಪದ ಗಾಯನ, ತಾಳ ವಾದ್ಯ, ಭಜನೆ, ಗಜಲ್ ಮೊದಲಾದ ಕಲೆಗಳನ್ನು ಪ್ರದರ್ಶಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.

ಬೇಬಾವತಿ, ಸ್ವಪ್ನಾ ನಾಯಕ್, ಜಾನ್ಸನ್ ಡೊಂಗರಗಿ, ಲೋಕನಾಥ ಚಾಂಗಲೇರಾ, ತಾಜೊದ್ದಿನ್, ನಾಗೇಶ, ತುಕಾರಾಮ, ಏಕನಾಥ, ರಂಗಪ್ಪ, ರಮೇಶ ಸುರೇಂದ್ರ, ಎಸ್ತೇರ್, ಮಲ್ಲಿಕಾರ್ಜುನ ಲಾಧಾಕರ, ಶಿವಸ್ವಾಮಿ ಚೀನಕೇರಾ, ಕುಪೇಂದ್ರ ಮಾಸಿಮಾಡ, ಸೋಮಶೇಖರ ಹೊಸಪೇಟೆ, ನರಸಿಂಗ್ ಬಿ.ಕೆ, ಶ್ರೀಕಾಂತ ಹಂಗರಗೆ ವಿವಿಧ ಕಲೆ ಪ್ರದರ್ಶಿಸಿದರು.

ADVERTISEMENT

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಉದ್ಘಾಟಿಸಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಸುರೇಶ ಚನಶೆಟ್ಟಿ, ಏಕತಾ ಫೌಂಡೇಷನ್ ಅಧ್ಯಕ್ಷ ರವೀಂದ್ರ ಸ್ವಾಮಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಪತ್ರಕರ್ತ ಅಪ್ಪಾರಾವ್ ಸೌದಿ, ಶಕುಂತಲಾ ವಾಲಿ, ಸ್ವಾಮಿದಾಸ ನಾಗೂರೆ, ಸತ್ಯವೀರ, ಇಮ್ಯಾನುವೆಲ್, ಆಕಾಶ, ಪನೀತ್, ಪ್ರವೀಣ, ಜಾಶ್ವ, ಸ್ವಾಮಿದಾಸ ಕಾಡವಾದ, ರಾಬರ್ಟ್, ಸಂತೋಷ ನಿಟ್ಟೂರೆ, ಮೌಲಪ್ಪ ಮಾಳಗೆ, ವಿಜಯಕುಮಾರ ಸೋನಾರೆ ಉಪಸ್ಥಿತರಿದ್ದರು.

ಜೀವನ ಪ್ರಕಾಶ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ ಅಧ್ಯಕ್ಷ ದಿಲೀಪ್ ಕಾಡವಾದ ಅವರನ್ನು ಸನ್ಮಾನಿಸಲಾಯಿತು. ದೇವಿದಾಸ ಜೋಶಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.