ADVERTISEMENT

ನಾಳೆ ಅಂತರರಾಷ್ಟ್ರೀಯ ಆದಿವಾಸಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 14:02 IST
Last Updated 16 ಆಗಸ್ಟ್ 2019, 14:02 IST
ವಿಜಯಕುಮಾರ ಡುಮ್ಮೆ
ವಿಜಯಕುಮಾರ ಡುಮ್ಮೆ   

ಬೀದರ್: ‘ಇಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ಆಗಸ್ಟ್ 18 ರಂದು ಬೆಳಿಗ್ಗೆ 10.30ಕ್ಕೆ ಅಂತರರಾಷ್ಟ್ರೀಯ ಆದಿವಾಸಿ ದಿನಾಚರಣೆ, ಮಹಾತ್ಮ ಬೊಮ್ಮಗೊಂಡೇಶ್ವರ ಜಯಂತ್ಯುತ್ಸವ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಆದಿವಾಸಿ ಸಾಹಿತ್ಯ ಪರಿಷತ್ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ ಡುಮ್ಮೆ ತಿಳಿಸಿದರು.

‘ಶಾಸಕ ಬಂಡೆಪ್ಪ ಕಾಶೆಂಪೂರ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಆದಿವಾಸಿ ರಕ್ಷಣಾ ಪರಿಷತ್ತಿನ ರಾಜ್ಯ ಅಧ್ಯಕ್ಷ ಎಂ. ಕೃಷ್ಣಯ್ಯ, ಅಬಕಾರಿ ಉಪ ಆಯುಕ್ತೆ ಶಶಿಕಲಾ ಒಡೆಯರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೂರ್ಯಕಾಂತ ಜೋಜನಾ, ಡಿಡಿಪಿಐ ಎಚ್.ಸಿ. ಚಂದ್ರಶೇಖರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಕೆ.ಎಂ. ಮೈತ್ರಿ, ಡಿವೈಎಸ್‌ಪಿ ಹುಲ್ಲೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದು ಹೇಳಿದರು.

‘ಮಾಜಿ ಶಾಸಕ ದಿ. ಮಾಣಿಕರಾವ್ ಫುಲೇಕರ್, ಉದ್ಯಮಿ ದಿ. ಮಾಣಿಕಪ್ಪ ಕಾಶೆಂಪೂರ, ದಿ. ನಾಗಪ್ಪ ಚಿದ್ರಿ, ದಿ. ಕಲ್ಯಾಣರಾವ್ ಪಾಟೀಲ ಹಿಲಾಪೂರ ಅವರಿಗೆ 2019ನೇ ಸಾಲಿನ ಆದಿವಾಸಿ ರತ್ನ, ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್ ಚಿಮಕೋಡ್, ರಾಜಗೊಂಡ ಸಮಾಜದ ಅಧ್ಯಕ್ಷ ವಿಶಾಲ ಮಹಾರಾಜ ಅವರಿಗೆ ಆದಿವಾಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಪರಿಷತ್ ಉಪಾಧ್ಯಕ್ಷ ಆನಂದ ಕಾಶೆಂಪೂರ, ಪ್ರಧಾನ ಕಾರ್ಯದರ್ಶಿ ತುಕಾರಾಮ ಚಿಮಕೋಡ, ಸಂಘಟನಾ ಕಾರ್ಯದರ್ಶಿ ಮಾಣಿಕ ಬರಿದಾಬಾದ್, ಸಂಗಪ್ಪ ಚಿದ್ರಿ, ಕೃಷ್ಣ ಚಾಂದೋರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.