ADVERTISEMENT

ಕಳವು: ಇಬ್ಬರ ಬಂಧನ, 13 ಮೊಬೈಲ್‌ ವಶ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 6:58 IST
Last Updated 16 ಫೆಬ್ರುವರಿ 2022, 6:58 IST
ಬೀದರ್‌ ನ್ಯೂಟೌನ್‌ ಠಾಣೆಯ ಪೊಲೀಸರು ಇಬ್ಬರು ಮೊಬೈಲ್‌ ಕಳ್ಳರನ್ನು ಬಂಧಿಸಿ 13 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ
ಬೀದರ್‌ ನ್ಯೂಟೌನ್‌ ಠಾಣೆಯ ಪೊಲೀಸರು ಇಬ್ಬರು ಮೊಬೈಲ್‌ ಕಳ್ಳರನ್ನು ಬಂಧಿಸಿ 13 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ   

ಬೀದರ್‌: ದಾರಿ ಹೋಕರಿಂದ ಮೊಬೈಲ್‌ ಕದ್ದು ಪರಾರು ಆಗುತ್ತಿದ್ದ ಇಬ್ಬರು ಆರೋಪಿಗಳನ್ನು ನ್ಯೂಟೌನ್‌ ಪೊಲೀಸ್‌ ಠಾಣೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ 13 ಮೊಬೈಲ್‌ ಗಳನ್ನು ಜಪ್ತಿ ಮಾಡಲಾಗಿದೆ. ಜನರ ಗಮನ ಬೇರೆ ಕಡೆ ಸೆಳೆದು ಮೊಬೈಲ್‌ ಕಳ್ಳತನ ಮಾಡುತ್ತಿದ್ದರು. ಕಳೆದ 6 ತಿಂಗಳಲ್ಲಿ 13 ಮೊಬೈಲ್‌ಗಳನ್ನು ಕಳ್ಳತನ ಮಾಡಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ತಿರುಮಲ್‌ ಮೆಡಿಕಲ್‌ ಸಮೀಪ ಮೊಬೈಲ್‌ ಕಳ್ಳತನ ಮಾಡಿದ ವ್ಯಕ್ತಿಯೊಬ್ಬರು ನ್ಯೂಟೌನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ನ್ಯೂಟೌನ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಪಿಎಸ್ಐ ತಸ್ಲೀಮ್, ಸಿಬ್ಬಂದಿ, ವಿಜಯಕುಮಾರ, ಪ್ರಕಾಶ, ವಿಶ್ವನಾಥ, ಶೇಖ ಮೋದಿನ್, ಸುನೀಲ್‌ ರಾಠೋಡ್‌ ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.