ADVERTISEMENT

ಒಳ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 8:17 IST
Last Updated 16 ಆಗಸ್ಟ್ 2020, 8:17 IST
ಬೀದರ್‌ನ ರೋಟರಿ ವೃತ್ತದ ಬಳಿ ಭಾನುವಾರ ಅಮೃತ ಯೋಜನೆಯಡಿ ಒಳ ಚರಂಡಿ ನಿರ್ಮಾಣ ಕಾಮಗಾರಿಗೆ ಸಂಸದ ಭಗವಂತ ಖೂಬಾ ಚಾಲನೆ ನೀಡಿ ಮಾತನಾಡಿದರು
ಬೀದರ್‌ನ ರೋಟರಿ ವೃತ್ತದ ಬಳಿ ಭಾನುವಾರ ಅಮೃತ ಯೋಜನೆಯಡಿ ಒಳ ಚರಂಡಿ ನಿರ್ಮಾಣ ಕಾಮಗಾರಿಗೆ ಸಂಸದ ಭಗವಂತ ಖೂಬಾ ಚಾಲನೆ ನೀಡಿ ಮಾತನಾಡಿದರು   

ಬೀದರ್: ಅಮೃತ ಯೋಜನೆಯ ನಗರದ ವಲಯ 2 ಮತ್ತು 3ರ ಒಳಚರಂಡಿ ಕಾಮಗಾರಿಯಲ್ಲಿ ಬಾಕಿ ಉಳಿದ 30 ಕಿಮೀ ಉದ್ದದ ಒಳ ಚರಂಡಿ ಕಾಮಗಾರಿಗೆ ಇಲ್ಲಿಯ ರೋಟರಿ ವೃತ್ತದದಲ್ಲಿ ಸಂಸದ ಭಗವಂತ ಖೂಬಾ ಭಾನುವಾರ ಚಾಲನೆ ನೀಡಿದರು.

ನಂತರ ಮಾತನಾಡಿ, ‘ಅಮೃತ ಯೋಜನೆಗೆ ಬೀದರ್‌ ನಗರ ಮೊದಲ ಹಂತದಲ್ಲೇ ಆಯ್ಕೆಯಾಗಿದೆ. ಈಗಾಗಲೇ ₹ 200 ಕೋಟಿ ವೆಚ್ಚದ ಕಾಮಗಾರಿ ಮುಕ್ತಾಯದ ಹಂತದಲ್ಲಿ ಇದೆ. ಇದೀಗ ಬಾಕಿ ಉಳಿದಿರುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಬೀದರ್‌ ಶಾಸಕ ರಹೀಂ ಖಾನ್, ವಿಧಾನ ಪರಿಷತ್‌ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಬಿಜೆಪಿ ಮುಖಂಡ ಬಾಬು ವಾಲಿ, ನಗರಸಭೆ ಆಯುಕ್ತ ಬಸಪ್ಪ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT