ADVERTISEMENT

ಮಡಿವಾಳೇಶ್ವರ ಶಾಲೆಯಲ್ಲಿ ಸಮವಸ್ತ್ರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:53 IST
Last Updated 15 ಜುಲೈ 2025, 7:53 IST
ಬೀದರ್‌ನ ಮಡಿವಾಳೇಶ್ವರ ಶಾಲೆಯಲ್ಲಿ ಸೋಮವಾರ ಸಮವಸ್ತ್ರ ದಿನ ಆಚರಿಸಲಾಯಿತು
ಬೀದರ್‌ನ ಮಡಿವಾಳೇಶ್ವರ ಶಾಲೆಯಲ್ಲಿ ಸೋಮವಾರ ಸಮವಸ್ತ್ರ ದಿನ ಆಚರಿಸಲಾಯಿತು   

ಬೀದರ್‌: ನಗರದ ಮಡಿವಾಳೇಶ್ವರ ಶಾಲೆಯಲ್ಲಿ ಸೋಮವಾರ ಸಮವಸ್ತ್ರ ದಿನ ಆಚರಿಸಲಾಯಿತು.

ಮಾರ್ಕೆಟ್‌ ಠಾಣೆ ಎಎಸ್‌ಐ ಬಾಪುರಾಯ ಬಿರಾದಾರ ಉದ್ಘಾಟಿಸಿ,‘ಸಮವಸ್ತ್ರವು ಬಡವ–ಶ್ರೀಮಂತ ಎಂಬ ಭೇದಭಾವವನ್ನು ತೊಲಗಿಸಿ ಮಕ್ಕಳಲ್ಲಿ ಏಕತೆಯ ಭಾವ ಮೂಡಿಸುತ್ತದೆ. ಶಿಸ್ತು, ಅನುಶಾಸನ ತರುತ್ತದೆ. ಯಾವುದೇ ವ್ಯಕ್ತಿ ಉನ್ನತ ಮಟ್ಟದ ಸಾಧನೆ ಮಾಡಬೇಕಾದರೆ ಜೀವನದಲ್ಲಿ ಶಿಸ್ತು, ಅನುಶಾಸನ ಮತ್ತು ಸಂಸ್ಕಾರ ಬಹಳ ಮುಖ್ಯ’ ಎಂದರು.

ಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್.ಬಿ.ಸಜ್ಜನಶೆಟ್ಟಿ ಮಾತನಾಡಿ,‘ಸಮವಸ್ತ್ರ ನಮ್ಮ ದಿನನಿತ್ಯದ ದಿನಚರಿಯಾಗಬೇಕು. ವಿದ್ಯಾರ್ಥಿಗಳು ಶಿಸ್ತು, ಸಂಯಮ ಮತ್ತು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು’ ಎಂದು ತಿಳಿಸಿದರು.

ADVERTISEMENT

ಅತ್ಯುತ್ತಮ ಸಮವಸ್ತ್ರ ಧರಿಸಿದ ಮಕ್ಕಳಿಗೆ ಬಹುಮಾನ ನೀಡಲಾಯಿತು. 

ಸಂಸ್ಥೆಯ ಕಾರ್ಯದರ್ಶಿ ಹನುಮಂತರಾವ ಪಾಟೀಲ, ಪ್ರೌಢ ಶಾಲೆಯ ಮುಖ್ಯಶಿಕ್ಷಕ ಶರಣು ಪಾಟೀಲ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಅರ್ಚನಾ ಶಿರಗೆರೆ ಇದ್ದರು. 

10ನೇ ತರಗತಿಯ ವಿದ್ಯಾರ್ಥಿಗಳಾದ ತ್ರೀಶಾ ಸಿದ್ದೇಶ್ವರ ಸ್ವಾಗತಿಸಿದರು. ಭವಾನಿ ನಾಗೇಂದ್ರ ವಂದಿಸಿದರು. ವೈಷ್ಣವಿ ರಾಜೇಂದ್ರ ಪ್ರಸಾದ ನಿರೂಪಿಸಿದರು. ಶ್ರೇಯಾ ಕೈಲಾಸ ವೈಯಕ್ತಿಕ ಗೀತೆ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.