ADVERTISEMENT

ಜಿಲ್ಲೆಯ ಜನರಿಗಾಗಿ ರೈಲು ಓಡಿಸಿದ್ದ ಅಂಗಡಿ: ಸಂಸದ ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 3:50 IST
Last Updated 24 ಸೆಪ್ಟೆಂಬರ್ 2020, 3:50 IST
ಬೀದರ್ -ಯಶವಂತಪುರ ರೈಲು ಪುನರ್ ಪ್ರಾರಂಭಿಸುವಂತೆ ಮನವಿ ಮಾಡಿದ ಸಂದರ್ಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಪುಷ್ಪಗುಚ್ಛ ನೀಡಿದ್ದ ಸಂಸದ ಭಗವಂತ ಖೂಬಾ
ಬೀದರ್ -ಯಶವಂತಪುರ ರೈಲು ಪುನರ್ ಪ್ರಾರಂಭಿಸುವಂತೆ ಮನವಿ ಮಾಡಿದ ಸಂದರ್ಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಪುಷ್ಪಗುಚ್ಛ ನೀಡಿದ್ದ ಸಂಸದ ಭಗವಂತ ಖೂಬಾ   

ಬೀದರ್‌: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ನಿಧನದ ಸುದ್ದಿ ತಿಳಿದು ಶಾಕ್‌ ಆಗಿದೆ. ವಾರದ ಹಿಂದೆಯಷ್ಟೇ ಬೀದರ್ ಯಶವಂತಪುರ ರೈಲು ಪುನರ್ ಪ್ರಾರಂಭದ ಕುರಿತು ಮಾತನಾಡಿದ್ದೆ. ಅವರು ರೈಲ್ವೆ ಸಚಿವರಾದ ಮೇಲೆ ರಾಜ್ಯಕ್ಕೆ ಬಹಳಷ್ಟು ಅನುಕೂಲವಾಗಿತ್ತು ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ.

ವಿಜಯದಶಮಿ, ದೀಪಾವಳಿ, ಗಣೇಶ್ ಚತುರ್ಥಿ ಸಂದರ್ಭದಲ್ಲಿ ವಿಶೇಷ ರೈಲು ಓಡಿಸಿ ಜಿಲ್ಲೆಯ ಜನರಿಗೆ ನೆರವಾಗಿದ್ದರು. ಬೀದರ್‌ ಜಿಲ್ಲೆಯ ಮಾರ್ಗವಾಗಿ ಹೋಗುವ ರೈಲ್ವೆ ಯೋಜನೆಗಳಿಗೂ ಅನುಕೂಲ ಮಾಡಿಕೊಟ್ಟಿದ್ದರು ಎಂದು ಅಂಗಡಿ ಅವರ ಸೇವೆಯನ್ನು ಸ್ಮರಿಸಿದ್ದಾರೆ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ನಿಧನದಿಂದ ಕರ್ನಾಟಕದ ಅಭಿವೃದ್ಧಿಗೆ ತುಂಬಲಾರದ ನಷ್ಟವಾಗಿದೆ.
ಅತ್ಯಂತ ಸಜ್ಜನ ರಾಜಕಾರಣಿ, ಅಪ್ರತಿಮ ಸಂಸದೀಯ ಪಟು, ಉತ್ತರಕರ್ನಾಟಕದ ಕಟ್ಟಾಳುವಿನ ಅಕಾಲಿಕ ಅಗಲಿಕೆ ಅತೀವ ನೋವು ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT