ADVERTISEMENT

ಹುಲಸೂರ: ಜಾನುವಾರುಗಳಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 12:21 IST
Last Updated 27 ಸೆಪ್ಟೆಂಬರ್ 2022, 12:21 IST
ಹುಲಸೂರ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ನಾಯಿಗೆ ರೇಬಿಸ್ ನಿರೋಧಕ ಲಸಿಕೆ ನೀಡಲಾಯಿತು
ಹುಲಸೂರ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ನಾಯಿಗೆ ರೇಬಿಸ್ ನಿರೋಧಕ ಲಸಿಕೆ ನೀಡಲಾಯಿತು   

ಹುಲಸೂರ: ‘ತಾಲ್ಲೂಕು ವ್ಯಾಪ್ತಿಯಲ್ಲಿಯ ಗ್ರಾಮಗಳಲ್ಲಿ ಜಾನುವಾರುಗಳಿಗೆ ಚರ್ಮಗಂಟು, ಬಾವು, ಜ್ವರ, ಕಣ್ಣಿನಿಂದ ನೀರು ಸೋರುವ ಲಕ್ಷಣಗಳು ಕಂಡುಬಂದರೆ ಅಂಥ ಜಾನುವಾರಗಳ ಮಾಲೀಕರು ರೋಗ ನಿರೋಧಕ ಲಸಿಕೆ ಹಾಕಿಸಬೇಕು’ ಎಂದು ಪಶು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ರಾವುಸಾಬ್ ಪಾಟೀಲ ತಿಳಿಸಿದರು.

ಪಟ್ಟಣದ ಇಸಂಪಲ್ಲಿ ಭವಾನಿ ಮಂದಿರದ ಆವರಣದಲ್ಲಿ ಮಂಗಳವಾರ ಜಾನುವಾರುಗಳಿಗೆ ಲಸಿಕೆ ಹಾಕಿ ಮಾತನಾಡಿದ ಅವರು,‘ಇಲ್ಲಿಯವರೆಗೆ ಸುಮಾರು 150 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ’ ಎಂದು ಹೇಳಿದರು.

ಶ್ವಾನಗಳಿಗೆ ರೇಬಿಸ್‌ ನಿರೋಧಕ ಲಸಿಕೆ ಕೊಡಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಜಾನುವಾರು ಅಧಿಕಾರಿ ಶಿವಕುಮಾರ ಕೌಟೆ, ಮೈತ್ರಿ ಕಾರ್ಯಕರ್ತ ಅಂಕಿತ ಅಷ್ಟೂರೆ, ರೈತರಾದ ಬಸವರಾಜ ಮುಕ್ತಾ, ಗುರುನಾಥ ಬಾಲಕುಂದೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜೀವ.ಪಿ.ಭೂಸಾರೆ, ಗ್ರಾ.ಪಂ. ಸದಸ್ಯ ನಾಗೇಶ ಮೇತ್ರೆ, ಬಾಬುರಾವ್ ಬಾಲಕುಂದೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.