ADVERTISEMENT

ಲಸಿಕಾ ಜಾಗೃತಿ: ಮನೆ, ಮನೆಗೆ ಭೇಟಿ ನೀಡಿ ಮನವೊಲಿಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 4:40 IST
Last Updated 20 ಅಕ್ಟೋಬರ್ 2021, 4:40 IST
ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಅವರು ಪಾದಯಾತ್ರೆ ನಡೆಸಿ ಕೋವಿಡ್‌ ಲಸಿಕಾ ಜಾಗೃತಿ ಮೂಡಿಸಿದರು. ತಹಶೀಲ್ದಾರ್‌ ರವಿಕುಮಾರ್‌ ದಾಮಾ, ಡಾ.ಗೋವಿಂದ್‌ ಇತರರು ಇದ್ದರು
ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಅವರು ಪಾದಯಾತ್ರೆ ನಡೆಸಿ ಕೋವಿಡ್‌ ಲಸಿಕಾ ಜಾಗೃತಿ ಮೂಡಿಸಿದರು. ತಹಶೀಲ್ದಾರ್‌ ರವಿಕುಮಾರ್‌ ದಾಮಾ, ಡಾ.ಗೋವಿಂದ್‌ ಇತರರು ಇದ್ದರು   

ಚಿಟಗುಪ್ಪ: ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಅವರು ಮಂಗಳವಾರ ಪಾದಯಾತ್ರೆ ನಡೆಸಿ ಗ್ರಾಮದ ವಿವಿಧ ಬಡಾವಣೆಗಳ ನಿವಾಸಿಗಳ ಮನೆಗಳಿಗೆ ಭೇಟಿ ನೀಡಿ ಕೋವಿಡ್‌ ಲಸಿಕೆ ಹಾಕಿಸಿದರು.

ಗ್ರಾಮದ ಆಲ್‌ ಅಮೀನ್‌ ಶಾಲೆ ಸುತ್ತಲಿನ ನಿವಾಸಿಗರು ಲಸಿಕೆ ಪಡೆಯಲು ನಿರಾಕರಿಸಿದ ಕಾರಣ ಜಿಲ್ಲಾಧಿಕಾರಿ ಮನೆಗಳಿಗೆ, ಮಸೀದಿಗಳಿಗೆ ಭೇಟಿ ನೀಡಿ ಸಂಜೆವರೆಗೂ ಮುಸ್ಲಿಮ್‌ ಸಮುದಾಯದ ನಾಗರಿಕರಿಗೆ ಲಸಿಕೆ ಕುರಿತು ಮಾಹಿತಿ ನೀಡಿ ಅವರಲ್ಲಿ ಅರಿವು ಮೂಡಿಸಿ ಸ್ಥಳದಲ್ಲಿಯೇ ಲಸಿಕೆ ಕೊಡಿಸಿದರು.

ಗ್ರಾಮದ 150 ನಾಗರಿಕರಿಗೆ ಲಸಿಕೆ ಹಾಕಿಸಿ ಮಾತನಾಡಿ,‘ಕೋವಿಡ್‌ ಲಸಿಕೆ ಕುರಿತು ಅನುಮಾನ ಬೇಡ. ತಜ್ಞರು ಆಳವಾದ ಸಂಶೋಧನೆ ನಡೆಸಿ ಆರೋಗ್ಯ ರಕ್ಷಣೆಗೆ ಲಸಿಕೆ ಸಿದ್ಧಪಡಿಸಿದ್ದಾರೆ. ಅದರಿಂದ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಭಯಪಡುವ ಅಗತ್ಯವಿಲ್ಲ. ಎಲ್ಲರೂ ಸ್ವಇಚ್ಛೆಯಿಂದ ಲಸಿಕೆ ಪಡೆಯಬೇಕು’ ಎಂದು ಅವರುಹೇಳಿದರು.

ADVERTISEMENT

ಜಿಲ್ಲಾ ವೈದ್ಯಾಧಿಕಾರಿ ವಿ.ಜಿ.ರೆಡ್ಡಿ, ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್‌, ತಹಶೀಲ್ದಾರ್ ರವಿಕುಮಾರ ದಾಮಾ, ತಾ.ಪಂ ಇಒ ಡಾ. ಗೋವಿಂದ್‌, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.