ADVERTISEMENT

ಬಸವಕಲ್ಯಾಣ | 1,106 ವಚನ ಕಂಠಪಾಠ: ನೀಲಾ ನಾಗಭೂಷಣ ಪ್ರಥಮ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 6:27 IST
Last Updated 24 ನವೆಂಬರ್ 2025, 6:27 IST
ಬಸವಕಲ್ಯಾಣದಲ್ಲಿ ಅನುಭವ ಮಂಟಪ ಉತ್ಸವ ಅಂಗವಾಗಿ ನಡೆದ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ನೀಲಾ ನಾಗಭೂಷಣ(ಪ್ರಥಮ) ಜಗದೀಶ ವೀರಪ್ಪ (ದ್ವಿತೀಯ) ವಿನಾಯಕ ಗುಜನಾಳ (ತೃತೀಯ) ಲತಾ ಶಿವಾನಂದ ಪಾಟೀಲ (ಸಮಾಧಾನಕರ ಬಹುಮಾನ) ಇವರನ್ನು ಸನ್ಮಾನಿಸಲಾಯಿತು
ಬಸವಕಲ್ಯಾಣದಲ್ಲಿ ಅನುಭವ ಮಂಟಪ ಉತ್ಸವ ಅಂಗವಾಗಿ ನಡೆದ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ನೀಲಾ ನಾಗಭೂಷಣ(ಪ್ರಥಮ) ಜಗದೀಶ ವೀರಪ್ಪ (ದ್ವಿತೀಯ) ವಿನಾಯಕ ಗುಜನಾಳ (ತೃತೀಯ) ಲತಾ ಶಿವಾನಂದ ಪಾಟೀಲ (ಸಮಾಧಾನಕರ ಬಹುಮಾನ) ಇವರನ್ನು ಸನ್ಮಾನಿಸಲಾಯಿತು   

ಬಸವಕಲ್ಯಾಣ: ನಗರದಲ್ಲಿ 46ನೇ ಅನುಭವ ಮಂಟಪ ಉತ್ಸವ ಅಂಗವಾಗಿ ಭಾನುವಾರ ನಡೆದ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯ ಬೇಲೂರಿನ ನೀಲಾ ನಾಗಭೂಷಣ 1106 ವಚನಗಳನ್ನು ಕಂಠಪಾಠ ಹೇಳಿ ಪ್ರಥಮ ಸ್ಥಾನ ಪಡೆದರು. ಅವರಿಗೆ ನವೆಂಬರ್ 29ರಂದು ನಡೆಯುವ ಕಾರ್ಯಕ್ರಮದಲ್ಲಿ ₹ 20,000 ನಗದು ಬಹುಮಾನ, ಪ್ರಮಾಣ ಪತ್ರ ನೀಡಲಾಗುತ್ತದೆ.

ಚಿಂಚೋಳಿಯ ಜಗದೀಶ ವೀರಪ್ಪ ಚಿಮ್ಮನಚೂಡು ಅವರು 951 ವಚನಗಳನ್ನು ಕಂಠಪಾಠ ಹೇಳಿ ದ್ವಿತೀಯ ಬಹುಮಾನ, 15000 ನಗದು, ಬೈಲಹೊಂಗಲನ ವಿನಾಯಕ ಗುಜನಾಳ ಮದನಬಾವಿ 788 ವಚನಗಳನ್ನು ಹೇಳಿ ತೃತೀಯ ಬಹುಮಾನ, ₹ 10,000 ನಗದು ಪಡೆದರು. ರಾಯಬಾಗ ತಾಲ್ಲೂಕಿನ ಲತಾ ಶಿವಾನಂದ ಪಾಟೀಲ ಜೋಡಟ್ಟಿ 700 ವಚನಗಳನ್ನು ಹೇಳಿ ಸಮಾಧಾನಕರ ಬಹುಮಾನ ಪಡೆದರು.

ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಸುಶೀಲಾದೇವಿ ಬಿ. ಪಟೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕುಪೇಂದ್ರ ಪಾಟೀಲ, ಪತ್ರಕರ್ತ ದೇವಯ್ಯ ಗುತ್ತೇದಾರ, ವಿಜಯಲಕ್ಷ್ಮಿ ಗಡ್ಡೆ, ಸಮೇದ ಪಟೇಲ್, ಲಕ್ಷ್ಮಿಪುತ್ರ ನಿಂಬಾಳಕರ್, ರವೀಂದ್ರ ಕೊಳಕೂರ, ಆಕಾಶ ಖಂಡಾಳೆ, ಜಗನ್ನಾಥ ಪಾಟೀಲ, ಬಸವರಾಜ ಮೂರುಡ, ಶಿವಪುತ್ರ ದುರ್ಗೆ, ದೀಪಕ ಠಮಕೆ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.