ADVERTISEMENT

ಬೀದರ್: ಶ್ರದ್ಧೆ, ಭಕ್ತಿಯ ವೈಕುಂಠ ಏಕಾದಶಿ ಆಚರಣೆ

ಅನಂತಶಯನ ಮಂದಿರದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 14:18 IST
Last Updated 13 ಜನವರಿ 2022, 14:18 IST
ಬೀದರ್‌ನ ಬ್ಯಾಂಕ್‌ ಕಾಲೊನಿಯ ವೆಂಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು
ಬೀದರ್‌ನ ಬ್ಯಾಂಕ್‌ ಕಾಲೊನಿಯ ವೆಂಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು   

ಬೀದರ್: ಇಲ್ಲಿಯ ಓಡವಾಡದ ಅನಂತಶಯನ (ವೆಂಕಟೇಶ್ವರ) ಮಂದಿರದಲ್ಲಿ ಗುರುವಾರ ವೈಕುಂಠ ಏಕಾದಶಿಯನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.

ವಿಷ್ಣು ಸಹಸ್ರನಾಮ ಪಾರಾಯಣ, ಮಹಾಪೂಜೆ, ಪ್ರವಚನ, ಭಜನೆ ಮೊದಲಾದ ಕಾರ್ಯಕ್ರಮಗಳು ಜರುಗಿದವು.
ವಿವಿಧೆಡೆಯಿಂದ ಬಂದಿದ್ದ ಭಕ್ತರು ದೇವರ ದರ್ಶನ ಪಡೆದು ಕೃತಾರ್ಥರಾದರು.

ಉಪವಾಸ ವ್ರತ ಆಚರಿಸುವ ಭಕ್ತರಿಗೆ ಬಾಳೆ ಹಣ್ಣು, ಉಪಾಹಾರ ಹಾಗೂ ಹಾಲು ವಿತರಿಸಲಾಯಿತು. ರಾತ್ರಿ ಮಹಾ ಮಂಗಳಾರತಿ ಜರುಗಿತು.

ADVERTISEMENT

ಏಕಾದಶಿ ಪ್ರಯುಕ್ತ ಬೆಂಗಳೂರು, ಹೈದರಾಬಾದ್, ಚಿತ್ರದುರ್ಗದಿಂದ ತಂದಿದ್ದ ಹೂವುಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ದೇವರ ವಿಗ್ರಹಕ್ಕೆ ವಿಶೇಷ ಶೃಂಗಾರ ಮಾಡಲಾಗಿತ್ತು.

ಬಾಳು ಹಸನು: ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಗಿರಿಧರ ಪೂಜಾರಿ ಅವರು, ವೈಕುಂಠ ಏಕಾದಶಿ ಪವಿತ್ರವಾದದ್ದು. ಈ ದಿನ ದೇವರ ದರ್ಶನ ಪಡೆದವರ ಬಾಳು ಹಸನಾಗುತ್ತದೆ ಎಂದು ತಿಳಿಸಿದರು.

ವೆಂಕಟೇಶ ಯರಮಲ್ಲಿ ಮಾತನಾಡಿ, ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸ ಇದೆ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಮಾತನಾಡಿ, ಭಕ್ತರು ಸುರಕ್ಷತಾ ನಿಯಮ ಪಾಲಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ ಎಂದು ಹೇಳಿದರು.

ವೆಂಕಟೇಶ ಪಿ. ಗಾದಾ ಮಾತನಾಡಿದರು. ಅನಂತಶಯನ ಮಂದಿರದ ಅಧ್ಯಕ್ಷ ಸಂಗಯ್ಯ ರೇಜಂತಲ್, ಕಾರ್ಯದರ್ಶಿ ದಿಗಂಬರ ಪೋಲಾ, ಚಿಟ್ಟಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಬಿರಾದಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.