ADVERTISEMENT

ವೈಭೋಗ ತ್ಯಜಿಸಿದ ವೇಮನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 9:54 IST
Last Updated 21 ಜನವರಿ 2020, 9:54 IST
ಚಿಟಗುಪ್ಪ ಪಟ್ಟಣದ ಪುರಸಭೆ ಕಚೇರಿಯಲ್ಲಿ ಭಾನುವಾರ ವೇಮನ ಜಯಂತಿ ಆಚರಿಸಲಾಯಿತು
ಚಿಟಗುಪ್ಪ ಪಟ್ಟಣದ ಪುರಸಭೆ ಕಚೇರಿಯಲ್ಲಿ ಭಾನುವಾರ ವೇಮನ ಜಯಂತಿ ಆಚರಿಸಲಾಯಿತು   

ಚಿಟಗುಪ್ಪ: 'ಮಹಾಯೋಗಿ ಶ್ರೀ ವೇಮನ ರಾಜವಂಶಸ್ಥನಾಗಿದ್ದರೂ ಸಾಮಾಜಿಕ ಸಮಾನತೆಯ ನ್ಯಾಯಕ್ಕಾಗಿ ವೈಭವದ ಜೀವನವನ್ನು ತ್ಯಾಗ ಮಾಡಿದ ಶ್ರೇಷ್ಠ ದಾರ್ಶನಿಕರಾಗಿದ್ದಾರೆಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀಪಾದ ಅವರು ಹೇಳಿದರು.

ಇಲ್ಲಿಯ ಪುರಸಭೆ ಕಚೇರಿಯಲ್ಲಿ ನಡೆದ ವೇಮನರ ಜಯಂತಿ ಕಾರ್ಯಕ್ರಮದಲ್ಲಿ ಅವರು ವೇಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

'ಸಮಾಜದಲ್ಲಿಯ ಅನ್ಯಾಯ, ಅಸ್ಪೃಶ್ಯತೆ, ಅಸಮಾನತೆ ತೊಡೆದು ಹಾಕಲು ರಾಜವೈಭೋಗವನ್ನು ತ್ಯಜಿಸಿ ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟದ್ದವರು ವೇಮನರು' ಎಂದು
ವಿವರಿಸಿದರು.

ADVERTISEMENT

ಕಚೇರಿ ಮೇಲ್ವಿಚಾರಕ ಉಮೇಶ ಗುಡ್ಡದ್, ಸಿಬ್ಬಂದಿ ರವಿ ಸ್ವಾಮಿ, ಪ್ರಹ್ಲಾದ್, ವೈಶಾಲಿ, ಕವಿತಾ, ಸರೋಜನಿ, ಬಬಿತಾ,ರವಿ, ಉಮೇ ಶ್,ಶೈಲೇಶ್,ನಾಗೇಂದ್ರ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.