ADVERTISEMENT

ಸನ್‍ಶೈನ್ ಕಾಲೇಜು: ವಿವಿಧ ಸ್ಪರ್ಧೆ

social

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 14:17 IST
Last Updated 1 ಆಗಸ್ಟ್ 2022, 14:17 IST
ಬೀದರ್‌ನ ಸನ್‍ಶೈನ್ ಪದವಿ ಕಾಲೇಜಿನಲ್ಲಿ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜು ನಿರ್ದೇಶಕ ಶಿವಕುಮಾರ ಕೊತಮಿರ್, ಪ್ರಾಧ್ಯಾಪಕ ಸಂಜೀವಕುಮಾರ ತಾಂದಳೆ, ಕಿರಣಕುಮಾರ ಇದ್ದರು
ಬೀದರ್‌ನ ಸನ್‍ಶೈನ್ ಪದವಿ ಕಾಲೇಜಿನಲ್ಲಿ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜು ನಿರ್ದೇಶಕ ಶಿವಕುಮಾರ ಕೊತಮಿರ್, ಪ್ರಾಧ್ಯಾಪಕ ಸಂಜೀವಕುಮಾರ ತಾಂದಳೆ, ಕಿರಣಕುಮಾರ ಇದ್ದರು   

ಬೀದರ್: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಇಲ್ಲಿಯ ಸನ್‍ಶೈನ್ ಕಾಲೇಜಿನಲ್ಲಿ ವಿವಿಧ ಸ್ಪರ್ಧೆಗಳು ನಡೆದವು.

ಓಟ, ಕಿರು ನಾಟಕ, ಪ್ರಬಂಧ, ಚರ್ಚೆ, ಚಿತ್ರಕಲೆ, ಪೊಸ್ಟರ್ ತಯಾರಿಕೆ ಸ್ಪರ್ಧೆ, ದೇಶ ಭಕ್ತಿ ಗೀತೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಕಾಲೇಜು ವಿವಿಧ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ ಎಂದು ಕಾಲೇಜಿನ ನಿರ್ದೇಶಕ ಶಿವಕುಮಾರ ಕೊತಮಿರ್ ಹೇಳಿದರು.

ADVERTISEMENT

ವಿದ್ಯಾರ್ಥಿಗಳು ದೇಶದ ಸ್ವಾತಂತ್ರ್ಯದ ಇತಿಹಾಸ ಅರಿಯಬೇಕು. ದೇಶ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಪ್ರಾಧ್ಯಾಪಕ ಸಂಜೀವಕುಮಾರ ತಾಂದಳೆ ಸಲಹೆ ಮಾಡಿದರು.

ಕಿರಣಕುಮಾರ, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯೂಎಸಿ) ಹಾಗೂ ಸಾಂಸ್ಕøತಿಕ ಘಟಕದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.