ADVERTISEMENT

ನಿರುದ್ಯೋಗಿಗಳಿಗೆ ವಸತಿ ಸಹಿತ ವಿವಿಧ ಉಚಿತ ತರಬೇತಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 15:30 IST
Last Updated 4 ಸೆಪ್ಟೆಂಬರ್ 2020, 15:30 IST

ಬೀದರ್: ಡಿಸಿಸಿ ಬ್ಯಾಂಕ್ ಪ್ರಾಯೋಜಿತ ಇಲ್ಲಿಯ ಶಾರದಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಆರ್‍ಸೆಟಿ)ಯು ಜಿಲ್ಲಾ ಪಂಚಾಯಿತಿಯ ಎನ್‍ಆರ್‍ಎಲ್‍ಎಂ ಯೋಜನೆಯಡಿ ಊಟ, ವಸತಿ ಸಹಿತ ವಿವಿಧ ಉಚಿತ ತರಬೇತಿಗಳಿಗಾಗಿ ನಿರುದ್ಯೋಗಿಗಳಿಂದ ಅರ್ಜಿ ಆಹ್ವಾನಿಸಿದೆ.

ಮೊಬೈಲ್ ಫೋನ್ ದುರಸ್ತಿ ಮತ್ತು ಸರ್ವಿಸಿಂಗ್ ತರಬೇತಿ ಅಕ್ಟೋಬರ್ 3 ರಿಂದ ನವೆಂಬರ್ 1 ರ ವರೆಗೆ, ಸಿಸಿ ಟಿವಿ ಇನ್‍ಸ್ಟಾಲೇಷನ್ ಮತ್ತು ದುರಸ್ತಿ ತರಬೇತಿ ಅಕ್ಟೋಬರ್ 5 ರಿಂದ ಅಕ್ಟೋಬರ್ 17 ಹಾಗೂ ಕಂಪ್ಯೂಟರ್ ಹಾರ್ಡ್‍ವೇರ್ ಮತ್ತು ನೆಟ್‍ವರ್ಕಿಂಗ್ ತರಬೇತಿ ಅಕ್ಟೋಬರ್ 19 ರಿಂದ ಡಿಸೆಂಬರ್ 2 ರ ವರೆಗೆ ನಡೆಯಲಿದೆ ಎಂದು ಶಾರದಾ ಆರ್‍ಸೆಟಿ ನಿರ್ದೇಶಕ ತಿಳಿಸಿದ್ದಾರೆ.

ಜಿಲ್ಲೆಯ ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ಹೊಂದಿರುವ 18 ರಿಂದ 45 ವರ್ಷದ ಒಳಗಿನ ನಿರುದ್ಯೋಗಿಗಳು ತರಬೇತಿಗೆ ಅರ್ಹರು.

ADVERTISEMENT

10ನೇ ಮೇಲ್ಪಟ್ಟು, ಪಿಯುಸಿ, ಐಟಿಐ, ಡಿಪ್ಲೊಮಾ ಹಾಗೂ ಪದವಿ ಪೂರೈಸಿರುವ ಅಭ್ಯರ್ಥಿಗಳು ಅಂಕಪಟ್ಟಿ, ಮೂಲಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ಝೆರಾಕ್ಸ್ ಪ್ರತಿಗಳು ಹಾಗೂ ಇತ್ತೀಚಿನ ನಾಲ್ಕು ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬಹುದು. ತರಬೇತಿಯು ಕೊರೊನಾ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.

ಅರ್ಜಿಗಳನ್ನು ನಿರ್ದೇಶಕರು, ಶಾರದಾ ಆರ್‍ಸೆಟಿ, ಲಾಹೋಟಿ ಮಾರುತಿ ಶೋರೂಂ ಸಮೀಪ, ಪ್ರತಾಪನಗರ, ಬೀದರ್ ಇಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 08482-232810, 9632212268, 9481119999
ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.