ADVERTISEMENT

ಬಸವಕಲ್ಯಾಣಕ್ಕೆ ಭೇಟಿ: ರಾಜ್ಯಪಾಲರ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 15:35 IST
Last Updated 16 ಜುಲೈ 2021, 15:35 IST
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅವರನ್ನು ಸನ್ಮಾನಿಸಿದರು. ಶಶಿಧರ ಕೋಸಂಬೆ ಇದ್ದರು
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅವರನ್ನು ಸನ್ಮಾನಿಸಿದರು. ಶಶಿಧರ ಕೋಸಂಬೆ ಇದ್ದರು   

ಬೀದರ್: ಕೋವಿಡ್ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರ ಬಸವಕಲ್ಯಾಣಕ್ಕೆ ಭೇಟಿ ನೀಡುವೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋಟ್ ತಿಳಿಸಿದರು.

ಬೆಂಗಳೂರಿನ ರಾಜಭವನದಲ್ಲಿ ತಮ್ಮನ್ನು ಸನ್ಮಾನಿಸಿ, ಬಸವಕಲ್ಯಾಣಕ್ಕೆ ಆಹ್ವಾನ ನೀಡಿದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರಿಗೆ ಅವರು ಈ ಭರವಸೆ ನೀಡಿದರು.

ಗುರುಬಸವ ಪಟ್ಟದ್ದೇವರು ಜಗತ್ತಿನ ಮೊಟ್ಟ ಮೊದಲ ಸಂಸತ್ ಎಂದೇ ಕರೆಯಲಾಗುವ ಬಸವಕಲ್ಯಾಣದ ಅನುಭವ ಮಂಟಪ, ಬಸವೇಶ್ವರರ ಸಾಮಾಜಿಕ ಕ್ರಾಂತಿ, ಶರಣರ ಸರಳ, ಸಾತ್ವಿಕ, ಸಹಜ ಬದುಕಿನ ಚಿತ್ರಣವನ್ನು ರಾಜ್ಯಪಾಲರಿಗೆ ನೀಡಿದರು.

ADVERTISEMENT

ಬಸವಣ್ಣನವರ ವಿಗ್ರಹ, ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಯ ವಚನ ಸಂಪುಟಗಳನ್ನು ಸ್ಮರಣಿಕೆ ರೂಪದಲ್ಲಿ ಕೊಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಶಶಿಧರ ಕೋಸಂಬೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.