ADVERTISEMENT

ವಿವೇಕ್‌ ವಿನೋದಗೆ 600ಕ್ಕೆ 600 ಅಂಕ

ದ್ವಿತೀಯ ಪಿಯು ಫಲಿತಾಂಶ: ಚನ್ನಬಸವೇಶ್ವರ ಗುರುಕುಲ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 5:52 IST
Last Updated 21 ಜುಲೈ 2021, 5:52 IST
ವಿವೇಕ್‌
ವಿವೇಕ್‌   

ಭಾಲ್ಕಿ: ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ವಿವೇಕ್‌ ವಿನೋದ ದ್ವಿತೀಯ ಪಿಯು ಪರೀಕ್ಷೆಯಲ್ಲಿ 600ಕ್ಕೆ 600 ಅಂಕ ಪಡೆದು ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯ ಬಸವರಾಜ್‌ ಮೊಳಕೀರೆ ತಿಳಿಸಿದ್ದಾರೆ.

ಕೊರೊನಾ ಪ್ರಯುಕ್ತ ಪಿಯು ದ್ವಿತೀಯ ವರ್ಗದ ವಾರ್ಷಿಕ ಪರೀಕ್ಷೆ ನಡೆಯಲಿಲ್ಲ. ಶಿಕ್ಷಣ ಇಲಾಖೆ ಪಿಯು ದ್ವಿತೀಯ ವರ್ಗದ ವಿದ್ಯಾರ್ಥಿಗಳು ಹತ್ತನೇ, ಪಿಯು ಪ್ರಥಮ ವರ್ಷದ ಪರೀಕ್ಷೆಯಲ್ಲಿ ಪಡೆದ ಅಂಕ ಮತ್ತು ಆಂತರಿಕ ಅಂಕಗಳನ್ನು ಪರಿಗಣಿಸಿ ಮಂಗಳವಾರ ಫಲಿತಾಂಶ ಪ್ರಕಟಿಸಿದೆ.

ಸಾಧಕ ವಿದ್ಯಾರ್ಥಿಗಳು: ಸಾಗರ್‌ ಅಶೋಕ ಶೇ 99, ರಾಹುಲ್‌ ಸತೀಶ್‌ 98.83, ಭೀಮಾಶಂಕರ ಹಣಮಂತರಾವ್‌ 98.66, ತುಳಜೇಶ್ವರಿ 98.50, ಬಸವಪ್ರಜ್ಞಾ ಸಂಗಶೆಟ್ಟಿ 98.33, ಅಮಿತ್‌ ಜಾಧವ 98.33, ಅಭಿ಼ಷೇಕ ಮೊಳಕೀರೆ 97.50, ಸತ್ವೀರ್‌ ಶಿವಾಜಿ 97.16, ತಿಲಕ ಮತಗೊಂಡೆ 96.83, ಪ್ರೇಮ್‌ ಶಿವಕುಮಾರ 96.5, ಅನನ್ಯ ನಾಗಯ್ಯ 96.5 ಪ್ರತಿಶತ ಅಂಕ ಪಡೆದಿದ್ದಾರೆ.

ADVERTISEMENT

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.