
ಬೀದರ್: ‘ಮತದಾರರ ಪಟ್ಟಿ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ಕಾರ್ಯವು ಬಡವರು, ಶೋಷಿತರ ಮತದಾನದ ಹಕ್ಕು ಕಸಿಯುವ ಷಡ್ಯಂತ್ರದ ಕ್ರಮ’ ಎಂದು ಬಸವ ಮಂಟಪದ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ಎಸ್‌ಐಆರ್ ಜನಾಂದೋಲನ ಸಮಿತಿ ವತಿಯಿಂದ ನಗರದ ಕನ್ನಡ ಸಾಹಿತ್ಯ ಸಂಘದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಎಚ್ಚರ ಪ್ರಜಾತಂತ್ರ ಕೊಲ್ಲುವ ಅಸ್ತ್ರ ಎಸ್‌ಐಆರ್’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯವು ಪ್ರಜಾತಂತ್ರಕ್ಕೆ ಮಾರಕ. ಬಡ ಅಶಿಕ್ಷಿತ, ಅಲೆಮಾರಿ, ಅಲ್ಪಸಂಖ್ಯಾತ ಸಮುದಾಯಗಳ ಮತದಾನದ ಹಕ್ಕು ಕಸಿಯುತ್ತದೆ ಎಂದರು.
ಭಂತೆ ಜ್ಞಾನಸಾಗರ, ಸೆಕ್ರೇಡ್ ಹಾರ್ಟ್ ಚರ್ಚ್‌ನ ಫಾದರ್ ಕ್ಲೇರಿ ಡಿಸೋಜಾ, ಮುಹಮ್ಮದ್ ಮೋನಿಶ್ ಕೀರ್ಮಾನಿ ಮೌಲಾನಾ ಖತೀಬ್ ಅಲ್ ಅಮೀನ್ ಮಜೀದ್, ಬಸವ ಮಂಟಪದ ಮಾತೆ ಸತ್ಯಾದೇವಿ, ಜನಾಂದೋಲನ ಸಮಿತಿ ಸಂಚಾಲಕ ಶ್ರೀಕಾಂತ ಸ್ವಾಮಿ, ಸದಸ್ಯರಾದ ಅಬ್ದುಲ್ ಮನ್ನಾನ್ ಸೇಠ್, ಮಕ್ಸೂದ್ ಚಂದಾ, ಮುಹಮ್ಮದ್ ನಿಜಾಮದ್ದೀನ್, ವಿಜಯಕುಮಾರ್, ಮಂಜುಳಾ, ವಿನಯ್ ಕುಮಾರ್ ಮಾಳಗೆ, ಮಹೇಶ ಗೋರ್‌ನಾಳಕರ್, ಬಸವರಾಜ ಮಾಳಗೆ, ಸಂತೋಷ್ ಜೋಳದಾಪಕಾ, ಅಮೃತರಾವ್ ಚಿಮಕೋಡೆ, ಓಂಪ್ರಕಾಶ್ ರೊಟ್ಟೆ, ಜಗದೀಶ್ವರ ಬಿರಾದಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.