ADVERTISEMENT

ಭಾರಿ ಮಳೆಗೆ ಹೊಲದಲ್ಲಿ ನೀರು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 6:13 IST
Last Updated 11 ಜುಲೈ 2021, 6:13 IST
ಭಾಲ್ಕಿ ತಾಲ್ಲೂಕಿನ ನೀಲಮನಳ್ಳಿ ಗ್ರಾಮದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಹೊಲಗಳಲ್ಲಿ ನೀರು ನಿಂತಿರುವುದು
ಭಾಲ್ಕಿ ತಾಲ್ಲೂಕಿನ ನೀಲಮನಳ್ಳಿ ಗ್ರಾಮದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಹೊಲಗಳಲ್ಲಿ ನೀರು ನಿಂತಿರುವುದು   

ಭಾಲ್ಕಿ: ತಾಲ್ಲೂಕಿನ ನೀಲಮನಳ್ಳಿ, ನೀಲಮನಳ್ಳಿ ತಾಂಡಾ, ರುದನೂರ ಸೇರಿದಂತೆ ಇತರೆಡೆ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಗ್ರಾಮ ಸಮೀಪದ ಹಳ್ಳಗಳು ತುಂಬಿವೆ.

ಹಳ್ಳಗಳ ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿದ್ದು, ಬೆಳೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ. ಹೊಲಗಳಿಗೆ ತೆರಳಿದ ರೈತರು ಮನೆಗಳಿಗೆ ತೆರಳಲು ಹಳ್ಳಗಳಲ್ಲಿ ನೀರಿನ ಪ್ರಮಾಣ ತಗ್ಗುವರೆಗೆ ಕಾದು ನಂತರ ಮನೆ ಸೇರಿದ್ದಾರೆ ಎಂದು ಗ್ರಾಮಸ್ಥ ಸಂತೋಷ ಶೆಡೋಳೆ ತಿಳಿಸಿದರು.

ಹಲಬರ್ಗಾ, ಕೋನಮೇಳಕುಂದಾ, ಧನ್ನೂರ, ಸೇವಾನಗರ ಸೇರಿದಂತೆ ಇತರೆಡೆ ಸಾಧಾರಣ ಮಳೆ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.