ADVERTISEMENT

ಪುಂಗನೂರು ಆಕಳ ಲೀಟರ್ ಹಾಲಿನ ಬೆಲೆ ₹250

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 19:30 IST
Last Updated 7 ಫೆಬ್ರುವರಿ 2020, 19:30 IST
ರಾಜ್ಯಮಟ್ಟದ ಪಶು ಮೇಳದಲ್ಲಿ ಪ್ರದರ್ಶನಕ್ಕೆ ಇರುವ ಹೈದರಾಬಾದ್‌ನ ಕೋಟೇಶ್ವರರಾವ್ ಅವರ ಪುಂಗನೂರು ಆಕಳು ಹಾಗೂ ಹೋರಿಗಳು
ರಾಜ್ಯಮಟ್ಟದ ಪಶು ಮೇಳದಲ್ಲಿ ಪ್ರದರ್ಶನಕ್ಕೆ ಇರುವ ಹೈದರಾಬಾದ್‌ನ ಕೋಟೇಶ್ವರರಾವ್ ಅವರ ಪುಂಗನೂರು ಆಕಳು ಹಾಗೂ ಹೋರಿಗಳು   

ಜನವಾಡ: ಲೀಟರ್ ಹಾಲಿನ ಬೆಲೆ ₹40, ₹50 ಇರುವುದನ್ನು ಕೇಳಿದ್ದೇವೆ. ಆದರೆ, ರಾಜ್ಯ ಮಟ್ಟದ ಪಶು ಮೇಳದಲ್ಲಿ ಆಕಳೊಂದರ ಹಾಲಿನ ಬೆಲೆ ಲೀಟರ್‌ಗೆ ₹250 ಇರುವ ವಿಷಯ ರೈತರನ್ನು ಆಶ್ಚರ್ಯ ಚಕಿತಗೊಳಿಸಿತು.

ಹೈದರಾಬಾದ್‌ನ ಕೋಟೇಶ್ವರರಾವ್ ಮುಕಮಲ್ ಅವರು ತಮ್ಮ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಪುಂಗನೂರು ಆಕಳ ಹಾಲಿನ ಬೆಲೆಯೇ ಅನೇಕರು ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿತು.

‘ಹೋಮಿಯೊಪತಿ ಔಷಧ ತಯಾರಿಕೆಗೆ ಬಳಸುವ ಕಾರಣ ಪುಂಗನೂರು ತಳಿ ಆಕಳ ಹಾಲಿನ ಬೆಲೆ ಪ್ರತಿ ಲೀಟರ್‌ಗೆ ₹250 ಇದೆ’ ಎಂದು ಕೋಟೇಶ್ವರರಾವ್ ತಿಳಿಸಿದರು.

ADVERTISEMENT

‘ಪುಂಗನೂರು ತಳಿಯ ಆಕಳು ಹಾಗೂ ಹೋರಿ ತೀರಾ ಗಿಡ್ಡವಾಗಿರುವ ಕಾರಣ ಮನೆಯಲ್ಲೂ ಸಾಕಬಹುದಾಗಿದೆ. ವ್ಯರ್ಥವಾಗಿ ಹೋಗುವ ತರಕಾರಿಯನ್ನೇ ಆಹಾರವಾಗಿ ಕೊಡಬಹುದಾಗಿದೆ’ ಎಂದು ಹೇಳಿದರು.

‘ಪ್ರದರ್ಶನದಲ್ಲಿ ಇರುವ ಆಕಳು 26 ಇಂಚ್ ಹಾಗೂ ಹೋರಿ 27 ಇಂಚ್ ಎತ್ತರ ಇವೆ. ಆಕಳ ಬೆಲೆ ₹3 ಲಕ್ಷ ಹಾಗೂ ಹೋರಿ ಬೆಲೆ ₹ 2 ಲಕ್ಷ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.