ADVERTISEMENT

ಬೀದರ್‌ | ಸ್ವಾಮೀಜಿಯ ವ್ಯಾಟ್ಸ್ಯಾಪ್‌ ಹ್ಯಾಕ್: ಭಕ್ತರಿಗೆ ಸೈಬರ್‌ ವಂಚನೆ

ಹಣ ಕಳೆದುಕೊಂಡ ಭಕ್ತರು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 6:15 IST
Last Updated 12 ಆಗಸ್ಟ್ 2025, 6:15 IST
<div class="paragraphs"><p> ವಂಚನೆ</p></div>

ವಂಚನೆ

   

ಬೀದರ್‌: ಗೋರ್ಟಾ-ಬೇಮಳಖೇಡ-ನೌಬಾದ್‍ ಜ್ಞಾನಶಿವಯೋಗಾಶ್ರಮದ ಪೀಠಾಧಿಪತಿ ರಾಜಶೇಖರ ಶಿವಾಚಾರ್ಯ ಸ್ವಾಮೀಜಿಯ ವ್ಯಾಟ್ಸ್ಯಾಪ್‌ ಹ್ಯಾಕ್ ಮಾಡಿ, ಭಕ್ತರ ಸಂಖ್ಯೆಗಳಿಗೆ ಸಂದೇಶ ಕಳುಹಿಸಿ ಹಣ ವಂಚಿಸಿದ್ದಾರೆ.

ವಂಚಕರು ಸ್ವಾಮೀಜಿ ಅವರ ವ್ಯಾಟ್ಸ್ಯಾಪ್‌ ಸಂಖ್ಯೆಯಿಂದ ಯುಪಿಐ ಕೆಲಸ ಮಾಡುತ್ತಿಲ್ಲ. ತುರ್ತಾಗಿ ₹60 ಸಾವಿರ ಬೇಕಿದೆ. ಮೊಬೈಲ್ ಸಂಖ್ಯೆ 9905530397 (ಅಶೋಕ)ಗೆ ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ. ಎರಡು ಗಂಟೆಗಳಲ್ಲಿ ಮರಳಿಸಲಾಗುವುದು ಎಂದು ಸಂದೇಶ ಕಳುಹಿಸಿದ್ದರು. ಅದನ್ನು ನಂಬಿ ಭಕ್ತರು ವಂಚನೆಗೊಳಗಾಗಿದ್ದಾರೆ.

ADVERTISEMENT

ಮಹಾರಾಷ್ಟ್ರದ ಉದಗೀರ್‌ನ ಆಶಾ ಚಂದ್ರಕಾಂತ ಚಿಂತಾಮಣಿ ₹50 ಸಾವಿರ, ಶ್ರೀಶೈಲದ ರಮೇಶ ವಾರದ ₹30 ಸಾವಿರ, ರೇವಣಸಿದ್ದಪ್ಪ ತೇಗಂಪುರ ₹25 ಸಾವಿರ ಕಳೆದುಕೊಂಡಿದ್ದಾರೆ. ಈ ಸಂಬಂಧ ಬೀದರ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಲಾಗಿದೆ. ಭಕ್ತರು ಸುಳ್ಳು ಸಂದೇಶಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.