ಶಿಲ್ಪಾ ಶರ್ಮಾ
ಬೀದರ್ : ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಮಹಿಳೆಯರಿಗೆ ರಕ್ಷಣೆ ಹಾಗೂ ಭದ್ರತೆ ಕಲ್ಪಿಸುವಂತಹ ವಾತಾವರಣ ರೂಪಿಸುವ ಸಲುವಾಗಿ, ಜಿಲ್ಲೆಯಲ್ಲಿ ಸ್ಥಳೀಯ ದೂರು ನಿವಾರಣಾ (ಎಲ್‌ಸಿಸಿ) ಸಮಿತಿ ರಚನೆಯಾಗಿದ್ದು, ಇಂತಹ ದೌರ್ಜನ್ಯ ಉಂಟಾದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಚನೆಯಾಗಿರುವ ಈ ಸಮಿತಿಗೆ ದೂರು ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) 2013ರ ಕಾಯ್ದೆಯ ನಿಬಂದನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರುವುದಕ್ಕೋಸ್ಕರ SHe Box Portal ನ್ನು ಪ್ರಾರಂಭಿಸಲಾಗಿರುತ್ತದೆ. ಸದರಿ ಪೋರ್ಟಲ್, ಎಲ್ಲಾ ಸಾರ್ವಜನಿಕ, ಸರ್ಕಾರಿ/ಖಾಸಗಿ, ಸಾರ್ವಜನಿಕ , ಸಂಘಟಿತ ಅಥವಾ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಮಹಿಳಾ ಉದ್ಯೋಗಿಯು ತನ್ನ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಲು ಹಾಗೂ ಅದರ ಸ್ಥಿತಿಯನ್ನು ಪತ್ತೆ ಹಚ್ಚಲು ಮಾರ್ಗವನ್ನು ಒದಗಿಸುತ್ತದೆ ಎಂದಿದ್ದಾರೆ.
ಸದರಿ ಪೋರ್ಟಲ್‍ನ (ವೆಬ್‍ಸೈಟ್: https://shebox.wcd.gov.in) ಬಗ್ಗೆ ಈಗಾಗಲೇ ತಿಳಿಸಿರುವಂತೆ ಜಿಲ್ಲೆಯ 10 ಹಾಗೂ 10ಕ್ಕಿಂತ ಹೆಚ್ಚು ಜನ ಕರ್ತವ್ಯ ನಿರ್ವಹಿಸುವ ಎಲ್ಲಾ ಸರ್ಕಾರಿ/ಖಾಸಗಿ, ಸಾರ್ವಜನಿಕ, ಸಂಘಟಿತ/ಅಸಂಘಟಿತ ವಲಯಗಳಲ್ಲಿ ರಚಿಸಿರುವ ಆಂತರಿಕ ದೂರು ಸಮಿತಿಯ ವಿವರಗಳನ್ನು SHe Box Portal ನಲ್ಲಿ ಅಪ್ಲೋಡ್ ಮಾಡದೇ ಇದ್ದಲ್ಲಿ, ಸುಪ್ರೀಂ ಕೋರ್ಟ್ ಆದೇಶದಂತೆ, ಕಡ್ಡಾಯವಾಗಿ ಅಪ್‍ಲೋಡ್ ಮಾಡುವಂತೆ ಹಾಗೂ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ಎದುರಿಸುತ್ತಿರುವ ಹೆಚ್ಚು ಮಹಿಳಾ ಉದ್ಯೋಗಿಗಳು ಇದನ್ನು ಬಳಸಲು ಸಾಧ್ಯವಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಮತ್ತು ಅಸಂಘಟಿತ ವಲಯ, ಮನೆ ಕೆಲಸದ ಮಹಿಳೆಯರು, 10ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರಿಗೆ ಉಂಟಾಗುವ ಲೈಂಗಿಕ ಕಿರುಕುಳದ ಕುರಿತು ದೂರು ಸಲ್ಲಿಸಲು ಸಮಿತಿ ರಚನೆಯಾಗಿದೆ ಎಂದಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಲೂರ ಬೀದರ್ ದೂ.ಸಂ: 9980702545, 8310032095 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.