ADVERTISEMENT

ಬೀದರ್: ‘ಯುವ ಮನಸ್ಸಿಗೆ ಶಾಂತಿಯ ಮಾರ್ಗ ಅವಶ್ಯ’

ಬಸವಕಲ್ಯಾಣದಲ್ಲಿ ಇಷ್ಟಲಿಂಗ ಪೂಜೆ ತರಬೇತಿ ಕೇಂದ್ರ: ಸಚಿವ ಈಶ್ವರ ಖಂಡ್ರೆ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 5:44 IST
Last Updated 1 ಜನವರಿ 2026, 5:44 IST
ಹುಲಸೂರು ಪಟ್ಟಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು. ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಚಿಕ್ಕಮಂಗಳೂರು ಬಸವತತ್ವ ಪೀಠದ ಬಸವ ಮರುಳುಸಿದ್ಧ ಸ್ವಾಮೀಜಿ, ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಲಿಂಗರಾಜಪ್ಪ, ಜ್ಯೋತಿರ್ಲಿಂಗ ಸೂಗೂರು ಹಾಗೂ ಇತರರಿದ್ದರು
ಹುಲಸೂರು ಪಟ್ಟಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು. ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಚಿಕ್ಕಮಂಗಳೂರು ಬಸವತತ್ವ ಪೀಠದ ಬಸವ ಮರುಳುಸಿದ್ಧ ಸ್ವಾಮೀಜಿ, ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಲಿಂಗರಾಜಪ್ಪ, ಜ್ಯೋತಿರ್ಲಿಂಗ ಸೂಗೂರು ಹಾಗೂ ಇತರರಿದ್ದರು   

ಹುಲಸೂರ: ‘ಯುವಕರು ಅನೇಕ ಚಟಗಳನ್ನ ಮಾಡಿ ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ. ಶಾಂತಿ ಸಮಾಧಾನಕ್ಕಾಗಿ ಇಷ್ಟಲಿಂಗ ಪೂಜೆ ಅವಶ್ಯಕವಾಗಿದೆ. ಬಸವಕಲ್ಯಾಣದಲ್ಲಿ ಶೀಘ್ರ ಇಷ್ಟಲಿಂಗ ಪೂಜೆ ತರಬೇತಿ ಕೇಂದ್ರ ಪ್ರಾರಂಭ ಆಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಮಂಗಳವಾರ ರಾತ್ರಿ ಪಟ್ಟಣದ ಗುರುಬಸವೇಶ್ವರ ಸಂಸ್ಥಾನ ಮಠದ ಬಸವಕುಮಾರ ಶಿವಯೋಗಿಗಳವರ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಶರಣತತ್ವ ಪ್ರಚಾರ, ಪ್ರಸಾರ ಮಾಡುವ ಸಲುವಾಗಿ ಬಸವಕಲ್ಯಾಣದಲ್ಲಿ ಶೀಘ್ರವೇ ಶರಣ ಗ್ರಾಮ ತರಬೇತಿ ಕೇಂದ್ರ ಪ್ರಾರಂಭ ಆಗಲಿದೆ. ನಮ್ಮ ಸಮುದಾಯ ಜಗತ್ತಿಗೆ ಸಮಾನವಾದ ನ್ಯಾಯ ನೀಡಿದೆ. ವಚನ ಸಾಹಿತ್ಯದಲ್ಲಿ ಎಲ್ಲವನ್ನು ಅಡಗಿಕೊಂಡಿದೆ. ಪ್ರತಿಯೊಬ್ಬರೂ ವಚನ ಸಾಹಿತ್ಯ ಓದುವುದು ಅವಶ್ಯಕವಾಗಿದೆ. ಜಗತ್ತಿನ ಪ್ರಥಮ ಸಂಸತ್ ಬಸವಕಲ್ಯಾಣದ ಅನುಭವ ಮಂಟಪವಾಗಿದ್ದು, ವಿಶ್ವದಲ್ಲಿ ಗಮನ ಸೆಳೆಯುವ ಪ್ರವಾಸಿ ಕೇಂದ್ರ ಆಗಲಿದೆ’ ಎಂದರು.

ADVERTISEMENT

‘ಬಸವಕುಮಾರ ಶಿವಯೋಗಿಗಳು ಸಿದ್ಧಿ ಹಾಗೂ ಪವಾಡ ಪುರುಷರಾಗಿದ್ದರು. ಅಳುವವರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಮನುಷ್ಯನ ನಿಜವಾದ ಆಯುಷ್ಯ ಲಿಂಗೈಕ್ಯರಾದ ನಂತರ ಪ್ರಾರಂಭವಾಗುತ್ತದೆ. ಸಮಾಜದಲ್ಲಿ ಅವರನ್ನು ಎಷ್ಟು ದಿನ ನೆನಪಿಸಿಕೊಳ್ಳುತ್ತಾರೋ ಅಷ್ಟು ಆಯುಷ್ಯ ಹೊಂದಿರುತ್ತದೆ. ಬಸವಣ್ಣನವರು ಅದ್ಭುತ ಕಾರ್ಯವನ್ನು ಮಾಡಿದ್ದಾರೆ. ಸೂರ್ಯ ಚಂದ್ರ ಇರುವರೆಗೆ ಅವರು ಅಜರಾಮರಾಗಿ ಇರುತ್ತಾರೆ’ ಎಂದು ನಡಿದರು.

ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ,‘ಕಲ್ಯಾಣ ನಾಡಿನಲ್ಲಿ ಮೂರು ದಿನ ಅದ್ಭುತ ಕಾರ್ಯಕ್ರಮಗಳು ನಡೆಯುತ್ತಿದೆ. ಶ್ರೀಗಳು ಭಕ್ತಾದಿಗಳ ಮನ ಶುದ್ಧಿ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಶರಣ ತತ್ವ ಪಾಲನೆ ಆಗುತ್ತಿದೆ. ಶರಣರ ವಚನದಲ್ಲಿ ಅದ್ಭುತವಾದ ಶಕ್ತಿ ಅಡಗಿಕೊಂಡಿದೆ. ಮಕ್ಕಳಿಗೆ ವಚನದ ಬಗ್ಗೆ ತಿಳಿವಳಿಕೆ ಮೂಡಿಸಬೇಕು’ ಎಂದರು.

ಶಿವಾನಂದ ಸ್ವಾಮೀಜಿ, ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಗಣಪತಿ ಸಿನ್ನೂರ, ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಮಾತನಾಡಿದರು. 

ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಅಪ್ಪ ಅವರಿಗೆ ಗೌರವಿಸಲಾಯಿತು. ಶಿವಸ್ವಾಮಿ ಚಿನ್ನಕೆರಾ ಅವರು ‘ಬರೆದ ಹೂ ಗೊಂಚಲೂ, ಜೀವನ ತರಂಗಗಳು’ ಎಂಬ ಪುಸ್ತಕವನ್ನು ಸಚಿವ ಈಶ್ವರ ಖಂಡ್ರೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಭರತನೂರ ಶ್ರೀ ಚಿಕ್ಕಗುರು ನಂಜುಂಡೇಶ್ವರ ಸ್ವಾಮೀಜಿ, ತಾಂಬಾಳ ವಿಜಯಕುಮಾರ ಸ್ವಾಮೀಜಿ, ಸಾಯಿಗಾಂವ ಶಿವಾನಂದ ಸ್ವಾಮೀಜಿ, ಮಂಠಾಳದ ಅಭಿನವ ಚನ್ನಬಸವ ಸ್ವಾಮೀಜಿ, ಬೇಲೂರು ಪಂಚಾಕ್ಷರಿ ಸ್ವಾಮೀಜಿ, ಜ್ಯೋತಿರ್ಲಿಂಗ ಸುಗುರ, ಮೆಹಬೂಬ್ ಅನ್ವರ್, ಶರಣು ಪಾಟೀಲ, ಶಿವು ಸ್ವಾಮಿ ಚಿನ್ನಕೇರಾ, ಶಶಿಕಾಂತ ದುರ್ಗೆ, ಲತಾ ಹಾರಕೂಡೆ, ವಿವೇಕಾನಂದ ಚಳಕಾಪೂರೆ, ಶಿವರಾಜ ನರಶೆಟ್ಟಿ ಹಾಜರಿದ್ದರು.

ಶರಣಪ್ಪ ಗೋನಾಳ ಸಂಗೀತ ಸೇವೆ ನಡೆಸಿಕೊಟ್ಟರು. ವೈಜಿನಾಥ ಸಜ್ಜನಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.

ಹುಲಸೂರಿನಲ್ಲಿ ಬಸವಕುಮಾರ ಶ್ರೀ ಸುವರ್ಣ ಮಹೋತ್ಸವ ನಿಮಿತ್ತ ಅಲ್ಲಮ ಪ್ರಭುಗಳ ಶೂನ್ಯಪೀಠ ಅನುಭವ ಮಂಟಪದಲ್ಲಿ ಲಿಂಗಪೂಜೆ ನಡೆಯಿತು

‘ಗುರುಗಳ ಉಪದೇಶ ಆಲಿಸುವುದು ಅವಶ್ಯ’

ಹುಲಸೂರ: ‘ನೆಮ್ಮದಿ ಜೀವನ ಸಾಗಿಸಲು ಗುರುಗಳ ಉಪದೇಶ ಆಲಿಸುವುದರ ಜತೆಗೆ ಸಂಘದಲ್ಲಿ ಭಾಗವಹಿಸುವುದು ಅವಶ್ಯಕ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಳವಂತರಾದ ಪಾಟೀಲ ಹೇಳಿದರು.

ಬಸವಕುಮಾರ ಶಿವಯೋಗಿಗಳ ಸುವರ್ಣ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಗುರುಬಸವೇಶ್ವರ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಉದ್ಘಾಟಿಸಿದ ಅವರು ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ದೂರ ಮಲ್ಲಿಕಾರ್ಜುನ ಗುಂಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ 1972ರಿಂದ ಗುರು ಬಸವೇಶ್ವರ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಮಾವೇಶ ಮತ್ತು ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಈ ವೇಳೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ವೇಳೆ ಸಾಯಗಾಂವದ ಶಿವಾನಂದ ಸ್ವಾಮೀಜಿ ಠಾಣಾಕುಶನೂರ ಸಿದ್ದಲಿಂಗ ಸ್ವಾಮೀಜಿ ಪ್ರಮುಖವಾದ ಮಲ್ಲಪ್ಪ ದಬಾಲೆ ಓಂಕಾರ ಪಟ್ಟಿ ಬಸವರಾಜ ಹಾರಕೂಡೆ ಚಂದ್ರಕಾಂತ ಬುಚನಾಳೆ ಶಿವರಾಜ ಖಿಂಡಿಮಠ ರಾಜಕುಮಾರ ಕೌಟೆ ರಾಜಕುಮಾರ ನಿಡೋದೆ ಇತರರಿದ್ದರು. ಧನರಾಜ ಚಂದನಕೆರೆ ಸ್ವಾಗತಿಸಿ ನಿರೂಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.