ADVERTISEMENT

ಅರಣ್ಯ ರಕ್ಷಣೆ: ಕಾಡಂಚಿನ ಜನರ ಪಾತ್ರ ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 8:55 IST
Last Updated 22 ಮಾರ್ಚ್ 2012, 8:55 IST

ಕೊಳ್ಳೇಗಾಲ: `ವನ್ಯಜೀವಿ ಸಂಕುಲ ಮತ್ತು ಅರಣ್ಯ ಸಂರಕ್ಷಣೆಯಲ್ಲಿ ಕಾಡಂಚಿನ ಜನತೆಯ ಪಾತ್ರ ಮಹತ್ವದ್ದು~ ಎಂದು ಕಾವೇರಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಸುನಿತಾ ತಿಳಿಸಿದರು.

ಕಾವೇರಿ ವನ್ಯಜೀವಿ ವ್ಯಾಪ್ತಿಯ ಗೋಪಿನಾಥಂ, ದಂಡಳ್ಳಿ ಹಾಗೂ ಹಲಗೂರು ಗ್ರಾಮಗಳಲ್ಲಿ ಮಂಗಳವಾರ ಅರಣ್ಯ ಇಲಾಖೆ, ರೋಟರಿ ಸಂಸ್ಥೆ, ಪ್ಲಾನೆಟ್ ಗ್ರೀನ್ ವತಿಯಿಂದ ಪರಿಸರ ರಕ್ಷಣೆ ಬಗ್ಗೆ ಅರಿವು ಮೂಡಿಸಲು ಏರ್ಪಡಿಸಿದ್ದ ಶಾಂತರಾಜು ಮತ್ತು ತಂಡದವರ ನಾಟಕ ಪ್ರದರ್ಶನಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
 
ಪರಿಸರ ಉಳಿವು ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಬೇಕಿದೆ. ಅದರಲ್ಲೂ ಕಾಡಂಚಿನ ಗ್ರಾಮಗಳ ಜನತೆ ಅಮೂಲ್ಯ ಅರಣ್ಯ ಸಂಪತ್ತು ಬೆಂಕಿಯ ಕೆನ್ನಾಲಿಗೆಗೆ ಸಿಲುಕದಂತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಹೇಳಿದರು.

ಕಾಡು ನಾಶದಿಂದ ಉಂಟಾಗುವ ಪರಿಣಾಮಗಳು ಮತ್ತು ವನ್ಯಸಂಕುಲ ಸಂರಕ್ಷಣೆ ಮಹತ್ವದ ಬಗ್ಗೆ ಪ್ಲಾನೆಟ್ ಗ್ರೀನ್ ಅಧ್ಯಕ್ಷ ಟಿ.ಜಾನ್‌ಪೀಟರ್ ಮಾರ್ಗದರ್ಶನದಲ್ಲಿ ಶಾಂತರಾಜು ತಂಡ ನಾಟಕದ ಮೂಲಕ ಜನರ ಗಮನ ಸೆಳೆದರು.

ಪ್ರಭಾರ ಡಿ.ಎಫ್.ಒ ರವಿರಾಜ್‌ನಾರಾಯಣ್, ಆರ್‌ಎಫ್‌ಒ ಪ್ರಕಾಶ್, ಸ್ವಾಮಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.