ADVERTISEMENT

ಅರಿವಿನ ಕೊರತೆ: ಜೈವಿಕ ಡಿಸೇಲ್ ಬೆಳೆಗಿಲ್ಲ ಮಾನ್ಯತೆ

ಗೂಳೀಪುರ ನಾ.ಮಂಜು
Published 2 ಸೆಪ್ಟೆಂಬರ್ 2012, 8:10 IST
Last Updated 2 ಸೆಪ್ಟೆಂಬರ್ 2012, 8:10 IST

ಯಳಂದೂರು: `ಬೇಲಿ ಬದಿಯಲ್ಲಿ ಬೆಳೆದಿರುವ ಜಟ್ರೋಫಾ, ಹೊಲ ಗದ್ದೆಗಳಲ್ಲಿ ಉದುರಿ ಬೀಳುವ ಬೇವು, ಹೊಂಗೆ ಮರದ ತುಂಬಾ ನಳನಳಿಸುವ ಹಸಿರು ಇಂಧನದ ಕಾಯಿ, ಸಿಮರೊಬ, ಹಿಪ್ಪೆ ಬಗ್ಗೆ ಅನಾದರ....,~

ತಾಲ್ಲೂಕಿನಾದ್ಯಂತ ಹಸಿರು ಇಂಧನದ ಮೂಲವಾದ ಇಂತಹ ಹತ್ತಾರು ಬಗೆಯ ಜೈವಿಕ ಇಂಧನದ ಬೆಳೆಗಳು ಅಲ್ಲಲ್ಲಿ ಬೆಳೆದಿರು ವುದನ್ನು ಕಾಣಬಹುದು. ಆದರೆ ಅರಿವಿನ ಕೊರತೆಯ ಪರಿಣಾಮ ಇದನ್ನು ಸಂರಕ್ಷಿಸಿ ಆದಾಯದ ಮೂಲವಾಗಿ ಜಾಗೃತಿ ಮೂಡಿಸ ಬೇಕಾದ ಕಾರ್ಯಕ್ರಮಗಳು ನಡೆದಿಲ್ಲ. ಬೇಸಾಯಗಾರರಿಗೆ ಪರ್ಯಾಯ ಹಸಿರು ಇಂಧನ ಬೆಳೆ ವೈವಿಧ್ಯತೆ ತಿಳಿಯದೇ ಗೊಂದಲದಲ್ಲಿದ್ದಾರೆ.

ಇಲ್ಲಿ 960 ಹೆಕ್ಟೇರ್ ಬೀಳು ಭೂಮಿ ಇದೆ. ಇಂತಹ ಪರ್ಯಾಯ ಬೆಳೆಗಳನ್ನು ಬೆಳೆಯಲು ವಿಫುಲ ಅವ ಕಾಶಗಳಿವೆ. ನೀರಾವರಿ ಭೂಮಿಯಲ್ಲಿ ವಾಣಿಜ್ಯ ಬೆಳೆಗಳಾದ ಕಬ್ಬು 1706 ಹೆಕ್ಟೇರ್ ಹಾಗೂ ಸೂರ್ಯಕಾಂತಿಯನ್ನು 15 ಹೆಕ್ಟೇರ್ ಪ್ರದೇಶ ದಲ್ಲಿ ಮಾತ್ರ ಬೆಳೆಯಲಾಗು ತ್ತದೆ. ಅಲ್ಪ ಪ್ರಮಾಣದಲ್ಲಿ ನೆಲಗಡಲೆ, ಹರಳು, ಎಳ್ಳು, ಸೂರ್ಯ ಕಾಂತಿ ಬೆಳೆಯಲು ಆಸಕ್ತಿ ವಹಿಸಿದ್ದಾರೆ. 

ಆದರೆ ಕಡಿಮೆ ನೀರನ್ನು ಪಡೆದು, ಒಣ ಭೂಮಿಯಲ್ಲೂ ಸಮೃದ್ಧವಾಗಿ ಬೆಳೆಯುವ ಬೇವು, ಹೊಂಗೆ ಬೀಜ, ಸಿಮರೊಬಾ, ಹಿಪ್ಪೆ, ಹರಳು ಇವುಗಳನ್ನು ಬೆಳೆದು, ಸಂಗ್ರಹಿಸಿ ಮಾರಾಟ ಮಾಡುವ ಬಗ್ಗೆ ತಿಳಿದಿಲ್ಲ. ಅಲ್ಲಲ್ಲಿ ಬೆಳೆದಿರುವ ಗಿಡಗಳಿಂದ ಸಂಗ್ರಹ ಮಾಡುವ ಗೋಜಿಗೂ ಹೋಗುವುದಿಲ್ಲ. ಇವೆಲ್ಲ ಉದುರಿ ಮಣ್ಣು ಸೇರಿ ವ್ಯರ್ಥವಾಗಿ ಹೋಗುತ್ತದೆ ಎನ್ನುತ್ತಾರೆ ಇಲ್ಲಿನ ಕೃಷಿಕರು.

ಇಲಾಖೆಯ ಅಂಕಿ ಆಂಶಗಳ ಪ್ರಕಾರ ಇಲ್ಲಿನ ಭೌಗೋಳಿಕ ವಿಸ್ತೀರ್ಣ 26,473 ಹೆಕ್ಟೇರ್ ಇದೆ. ಅರಣ್ಯ 10,579 ಹೆಕ್ಟೇರ್, ವ್ಯವಸಾಯೇತರ ಭೂಮಿ 5,393 ಹೆ, ಬಂಜರು 238 ಹೆ. ಗಳಿಗೆ ಸೀಮಿತ ಗೊಂಡಿದೆ. ಇಲ್ಲಿ ಸಾಗುವಳಿಯಾಗದ 146 ಹೆ., ಕಾಯಂ ಗೋಮಾಳ 215 ಹೆ. ಹಾಗೂ 36 ಹೆ. ವೃಕ್ಷ ತೋಪನ್ನು ಒಳಗೊಂಡಿದೆ. ಒಟ್ಟಾರೆ 5,631 ಹೆಕ್ಟೇರ್ ಪ್ರದೇಶದಲ್ಲಿ ಜೈವಿಕ ಇಂಧನದ ಬೆಳೆಗಳನ್ನು ಬೆಳೆಯಲು ಅವಕಾಶಗಳಿವೆ. ಆದರೆ ಸಂಬಂಧಿಸಿದ ಇಲಾಖೆ ಈ ಬಗ್ಗೆ ಅರಿವು ಮೂಡಿಸಲು ಅಸ್ಥೆ ವಹಿಸಿಲ್ಲ ಎಂಬುದು ರೈತರ ದೂರು.

`ನಮ್ಮ ಜಮೀನಿನಲ್ಲಿ 300 ರಿಂದ 350 ಹೆಬ್ಬೇವಿನ ಮರ ಗಳನ್ನು ಬೆಳೆದಿದ್ದೇನೆ. ಆದರೆ ಈ ಬೀಜಗಳನ್ನು ಸಂಗ್ರಹಿಸಿ ಜೈವಿಕ ಇಂಧನಕ್ಕೆ ಬಳಕೆ ಯಾಗುವ ಬಗ್ಗೆ ಅರಿವಿಲ್ಲ. ಸ್ಥಳೀಯ ಬೇವನ್ನು ಬೆಳೆಯಲು ಹೆಚ್ಚಿನ ಅಸ್ಥೆ ವಹಿಸಬೇಕು. ಹೊಂಗೆ, ಹಿಪ್ಪೆ, ಬೇವುಗಳನ್ನು ಸುವರ್ಣ ಭೂಮಿ ಯೋಜನೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ತಾಲ್ಲೂಕು ಆಡಳಿತ ಬೆಳೆಯಲು ಅರಿವು-ನೆರವು ನೀಡಿದರೆ ಇದನ್ನು ಕೃಷಿ ಮಾಡುವುದಾಗಿ~ ಪ್ರಗತಿಪರ ರೈತ ಹೊನ್ನೂರು ಪ್ರಕಾಶ್ `ಪ್ರಜಾವಾಣಿ~ಗೆ ತಿಳಿಸಿದರು.

ಪರ್ಯಾಯ ಇಂಧನ ಮೂಲವಾದ ಇಂತಹ ಬೆಳೆಗಳನ್ನು ಬೆಳೆಯಲು ಬೇಕಾದ ಹಿತಕರವಾದ ವಾಯುಗುಣ. ಮಣ್ಣು, ನೀರು ಇಲ್ಲಿದೆ. ಕೆಲವರು ಗೃಹ ಕೈಗಾರಿಕೆ ಮೂಲವಾಗಿಯೂ ಬಳಸು ವವರು ಇದ್ದಾರೆ. ಕೆಲ ಬೇಸಾಯಗಾರರು ಹೊಲಗದ್ದೆಗಳ ಸುತ್ತ ಜಮೀನಿನ ಗಡಿ ಗುರುತಿಸಲು ಇಂತಹ ಗಿಡಗಳನ್ನು ಈಗಾಗಲೇ ನೆಟ್ಟಿದ್ದಾರೆ. ಆದರೆ ಜೈವಿಕ ಇಂಧನದ ವೃದ್ಧಿಗೆ ನೆರವು ನೀಡುವ ಹಾಗೂ ಬೆಳೆ ವೈವಿಧ್ಯತೆಗೆ ಸಹಕಾರ ನೀಡುವ ಬೆಳೆ ಬೆಳೆಯಲು ಸಂಬಂಧಿಸಿದವರು ಪ್ರೋತ್ಸಾಹ ನೀಡುವರೇ? ಕಾದು ನೋಡಬೇಕಿದೆ.
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.