ADVERTISEMENT

ಕೂತನೂರು ಸಂಕಷ್ಟ ನೂರು

ಎನ್.ನಾಗರಾಜ್
Published 28 ಸೆಪ್ಟೆಂಬರ್ 2011, 10:00 IST
Last Updated 28 ಸೆಪ್ಟೆಂಬರ್ 2011, 10:00 IST
ಕೂತನೂರು ಸಂಕಷ್ಟ ನೂರು
ಕೂತನೂರು ಸಂಕಷ್ಟ ನೂರು   

ಗುಂಡ್ಲುಪೇಟೆ: ತಾಲ್ಲೂಕಿನ ಕೂತನೂರು ಗ್ರಾಮದ ಚರಂಡಿಗಳ ಹೂಳು ತೆಗೆದು ಹಲವು ವರ್ಷಗಳೇ ಕಳೆದಿವೆ. ಗ್ರಾಮದ ಬೀದಿಗಳ ಮಧ್ಯ ಭಾಗದಲ್ಲಿ ಚರಂಡಿ ನೀರು ಹರಿಯುತ್ತದೆ. ಸಂಚಾರ ಮಾಡುವ ಜನರಿಗೆ ಚರಂಡಿ ತೊಡಕಾಗುತ್ತಿದೆ.

ಗ್ರಾಮದ ಮಧ್ಯ ಭಾಗದ ರಸ್ತೆಗಳನ್ನು ದುರಸ್ತಿ ಪಡಿಸಿಲ್ಲ. ಚರಂಡಿ ಸರಿಯಾಗಿಲ್ಲದ ಕಾರಣ ರಸ್ತೆ ಮಧ್ಯಭಾಗದಲ್ಲೇ ನೀರು ಹರಿಯುತ್ತದೆ. ಇದರಿಂದ ರಾತ್ರಿ ವೇಳೆ ಸೊಳ್ಳೆಗಳ ಕಾಟ ವಿಪರೀತವಾಗಿದೆ ಎನ್ನುವುದು ಗ್ರಾಮಸ್ಥರ ಆರೋಪ. ಈ ಗ್ರಾಮದಲ್ಲಿ ರೈತರು ಬೆಳೆದ ಬೆಳೆ ಒಕ್ಕಣೆ ಮಾಡಲು ಕಣ ಇಲ್ಲ.

ಇದರಿಂದ ರೈತರು ರಸ್ತೆಯನ್ನೇ ಆಶ್ರಯಿಸಿದ್ದಾರೆ. ಪಂಚಾಯಿತಿಯಲ್ಲಿ ಬಸವ ವಸತಿ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಅರ್ಹರನ್ನು ಕೈಬಿಟ್ಟಿದ್ದು  ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕಾರಣದಿಂದ ಗ್ರಾಮದ ಜಯಮ್ಮ ಎಂಬುವರು ಕಳೆದ 10-15 ವರ್ಷಗಳಿಂದ ಗುಡಿಸಿಲಿನಲ್ಲಿ ವಾಸವಾಗಿದ್ದಾರೆ.

ಈ ಗ್ರಾಮವು ಕೇರಳದ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಗ್ರಾಮದ ಇಕ್ಕೆಲಗಳಲ್ಲಿ ಇತ್ತೀ ಚೆಗೆ ತರಕಾರಿ ಅಂಗಡಿ ತೆರೆದು ಜನ ವ್ಯಾಪಾರ ಮಾಡುತ್ತಿದ್ದಾರೆ. ಬೀಡಿ ಕಟ್ಟುವ ಕಾಯಕಯವೂ ಇಲ್ಲಿನ ವಿಶೇಷ. ಗ್ರಾಮದ ನ್ಯಾಯ ಬೆಲೆ ಅಂಗಡಿಯಲ್ಲಿ ಸಮರ್ಪಕ ಪಡಿತರ ವಿತರಣೆ ಯಾಗುತ್ತಿಲ್ಲ. ಪಡಿತರವನ್ನು ಸರಿಯಾದ ಸಮಯಕ್ಕೆ ನೀಡುವುದಿಲ್ಲ.
 
ಇದರಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದೆ ಪಡಿತರಕ್ಕಾಗಿ ಕಾಯಬೇಕಿದೆ. ಕೂಲಿ ಸಿಗದೆ ಕೇರಳ ಕಡೆಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಉದ್ಯೋಗ ಭರವಸೆ ಯೋಜ ನೆಯ ಕೆಲಸಗಳು ಸಹ ಸರಿ ಯಾಗಿ ನಡೆಯುತ್ತಿಲ್ಲ.
ಗ್ರಾಮ ಸಭೆಯನ್ನು ಕಾಟಾ ಚಾರಕ್ಕೆ ನಡೆಸುತ್ತಾರೆ.
 
ಅರ್ಹ ಫಲಾನುಭವಿಗಳನ್ನು ಗುರುತಿಸು ವಲ್ಲಿ ಪಂಚಾಯಿತಿ ಅಧಿಕಾರಿ ಗಳು ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ನೈರ್ಮಲ್ಯದ ಬಗ್ಗೆ ವಿಶೇಷ ಶಿಬಿರ ಹಮ್ಮಿ ಕೊಳ್ಳಬೇಕು. ಬೀದಿ ದೀಪದ ವ್ಯವಸ್ಥೆ ಸರಿಪ ಡಿಸಬೇಕು ಎಂದು ಗ್ರಾಮದ ಮಾದಶೆಟ್ಟಿ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.