ADVERTISEMENT

ಜಿಲ್ಲೆಗೆ ಸಿಎಂ ಆಹ್ವಾನಿಸಬೇಡಿ!

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 8:25 IST
Last Updated 17 ಜುಲೈ 2012, 8:25 IST

ಚಾಮರಾಜನಗರ: ದಯಮಾಡಿ ನೂತನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಚಾಮರಾಜನಗರ ಜಿಲ್ಲೆಗೆ ಬರುವಂತೆ ಆಹ್ವಾನ ನೀಡಬೇಡಿ. ಅವರ ಪಕ್ಷದಲ್ಲಿ ಕಚ್ಚಾಟವಿದ್ದು, ಅವರು ಅಧಿಕಾರದಲ್ಲಿ 6 ತಿಂಗಳು ಉಳಿಯಬಹುದು. ಆಗ ಅಧಿಕಾರ ಕಳೆದುಕೊಂಡರೆ ಮತ್ತೆ ಜಿಲ್ಲೆಗೆ ಶಾಪ ಅಂಟುತ್ತದೆ. ಬೇಕಿದ್ದರೆ ಸ್ವಇಚ್ಛೆಯಿಂದ ಬಂದು ಹೋಗಲಿ ಎಂದು ಶಾಸಕ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.

ಆಧುನಿಕ ಯುಗದಲ್ಲಿ ಮೌಢ್ಯತೆ, ಕಂದಾಚಾರ ಜೀವಂತವಾಗಿರುವುದು ವಿಷಾದನೀಯ. ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತೇವೆ ಎಂದು ಹೇಳುವ ಮುಖ್ಯಮಂತ್ರಿಗಳು ರಾಜ್ಯವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ.

ಅನೇಕರು ತಮ್ಮ ದುರಾಸೆಯಿಂದ ಸೃಜನ ಪಕ್ಷಪಾತ, ಹಗರಣ, ಭ್ರಷ್ಟಚಾರವನ್ನು ಮಾಡಿ ಜೈಲು ವಾಸಿಗಳಾಗಿದ್ದಾರೆ ಅದೃಷ್ಟವಶಾತ್ ಅವರು ಜಿಲ್ಲಾ ಕೇಂದ್ರಕ್ಕೆ ಬರಲಿಲ್ಲ ಎಂದು ಲೇವಡಿ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.