ADVERTISEMENT

ಜ್ಞಾನ ಸಂಪತ್ತು ಬೆಳೆಸಿಕೊಳ್ಳಿ: ಮನೋರಖ್ಖಿತ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 8:35 IST
Last Updated 21 ಫೆಬ್ರುವರಿ 2011, 8:35 IST

ಕೊಳ್ಳೇಗಾಲ: ಸಂವಿಧಾನ ಉಳಿಸಿ ಬೆಳೆಸಲು ಪ್ರಜ್ಞಾವಂತರು ಪ್ರಯತ್ನಿಸ ಬೇಕು ಎಂದು ಚೆನ್ನಾಲಿಂಗನಹಳ್ಳಿ ಜೇತವನ ಮನೋರಖ್ಕಿತ ಬಂತೇಜಿ ಕರೆ ನೀಡಿದರು.ಪಟ್ಟಣದಲ್ಲಿ ಭಾನುವಾರ ಕೊಳ್ಳೇಗಾಲ ಹಾಗೂ ಹನೂರು ಶೈಕ್ಷಣಿಕ ವಲಯ ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಮಿತಿ ಏರ್ಪಡಿಸಿದ್ದ ಸಮಿತಿ ಉದ್ಘಾಟನೆ ಮತ್ತು ಮಹಾತ್ಮ ಜ್ಯೋತಿ ಬಾಪುಲೆ 185ನೇ ವರ್ಷ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಎಲ್ಲ ಸಂಪತ್ತಿಗಿಂತಲೂ ಜ್ಞಾನ ಸಂಪತ್ತು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಒಳಕಣ್ಣನ್ನು ತೆರೆದಾಗ ಮಾತ್ರ ಜೀವನದಲ್ಲಿ ಶಾಂತಿ, ನೆಮ್ಮದಿ, ಸುಖ ಅನುಭವಿಸಲು ಸಾಧ್ಯ ಎಂದರು.ಅಂಬೇಡ್ಕರ್ ಅವರ ಕನಸನ್ನು ನನಸಾಗಿಸುವ ನಮ್ಮ ಜನಾಂಗ ಮೀಸಲಾತಿ ಕೇಳುವ ಬದಲು ದೇಶವನ್ನು ಆಳುವಂತೆ ಮಾಡುವ ದಿಕ್ಕಿನಲ್ಲಿ ಮುನ್ನಡೆಯಲು ಪಣ ತೊಡಬೇಕಿದೆ ಎಂದು ಸಮಿತಿಯ ಹನೂರು ವಲಯ ಅಧ್ಯಕ್ಷ ಮಹದೇವಕುಮಾರ್ ತಿಳಿಸಿದರು.

ಅಂಬೇಡ್ಕರ್, ಜ್ಯೋತಿಬಾಪುಲೆ, ಭಾವಚಿತ್ರ ಅನಾವರಣವನ್ನು ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ನಾರಾಯಣ ಹಾಗೂ ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ನೆರವೇರಿಸಿ ಮಾತನಾಡಿದರು.ಮಹಾತ್ಮ ಜ್ಯೋತಿ ಬಾಪುಲೆ ಕುರಿತು ಎಲ್ಲೇಮಾಳ ಸ.ಪ್ರಾ.ಶಾಲೆ ಸಹ ಶಿಕ್ಷಕ ಎಂ. ಚಿಕ್ಕರಾಜು ವಿಷಯ ಮಂಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಮಿತಿ ಕೊಳ್ಳೇಗಾಲ ವಲಯ ಅಧ್ಯಕ್ಷ ಬಿ.ಸಿದ್ದರಾಜು, ಸಮಿತಿಯು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಎಲ್ಲಾ ಕಾರ್ಯಕ್ರಮಗಳಿಗೂ ಸದಸ್ಯರು ಸಹಕಾರ ನೀಡುವ ಮೂಲಕ ಹಾಗೂ ಹೆಚ್ಚು ಹೆಚ್ಚು ಸದಸ್ಯರನ್ನು ಸೇರ್ಪಡೆಗೊಳಿಸುವ ಮೂಲಕ ಸಮಿತಿಯನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.

ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಪಿ. ದೇವರಾಜು ಮಾಡಿದರು.  ಹನೂರು ಸರ್ಕಾರಿ ಜಿ.ವಿ.ಗೌಡ ಪ.ಪೂ. ಕಾಲೇಜು ಪ್ರಾಂಶುಪಾಲ ಸಿ.ಸಿದ್ದರಾಜು, ಕಾಮಗೆರೆ ಸ.ಪ.ಪೂ.ಕಾಲೇಜು ಪ್ರಾಂಶುಪಾಲರಾದ ಪುಟ್ಟಸಿದ್ದಮ್ಮ, ಕೊಳ್ಳೇಗಾಲ ಸರ್ಕಾರಿ ಎಸ್.ವಿ.ಕೆ. ಪ.ಪೂ. ಕಾಲೇಜು ಪ್ರಾಂಶುಪಾಲ ಪಿ. ಮಹದೇವ, ಸರ್ಕಾರಿ ಎಂ.ಜಿ.ಎಸ್.ವಿ. ಪ.ಪೂ. ಕಾಲೇಜು ಪ್ರಾಂಶುಪಾಲ ಬಿ. ಮಹದೇವ, ರಾಜ್ಯ ಸರ್ಕಾರಿ ನೌಕರರ ಸಂಘ ಕೊಳ್ಳೇಗಾಲ ಶಾಖೆ ಪ್ರಧಾನ ಕಾರ್ಯದರ್ಶಿ ಆರ್.ಪಿ.ನರೇಂದ್ರ ನಾಥ್, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘ ಕೊಳ್ಳೇಗಾಲ ವಲಯ ಅಧ್ಯಕ್ಷ ಬಿ. ದೊರೆಸ್ವಾಮಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಳ್ಳೇಗಾಲ ವಲಯ ಅಧ್ಯಕ್ಷ ಎಂ. ವಾಸು, ಕೊಳ್ಳೇಗಾಲ ವಲಯ ಗೌರವಾಧ್ಯಕ್ಷ ಟಿ.ಎನ್. ಶಿವಮಾದಯ್ಯ, ಹನೂರು ವಲಯ ಗೌರವಾಧ್ಯಕ್ಷ ಡಿ.ಬಿ. ರುದ್ರಸ್ವಾಮಿ ಭಾಗವಹಿಸಿದ್ದರು. ಸಮಿತಿ ಕೊಳ್ಳೇಗಾಲ ವಲಯ ಕಾರ್ಯದರ್ಶಿ ಜೆ. ಬಸವರಾಜು, ಹನೂರು ವಲಯ ಕಾರ್ಯದರ್ಶಿ ಕೆ.ಬಾಬು, ಕೆ.ಜೆ. ಜವರಯ್ಯ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.