ADVERTISEMENT

ನಗರ ಅಭಿವೃದ್ಧಿ ಮಾಡಿದ ತೃಪ್ತಿ ಇದೆ: ಹರ್ಷ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2011, 8:20 IST
Last Updated 24 ನವೆಂಬರ್ 2011, 8:20 IST
ನಗರ ಅಭಿವೃದ್ಧಿ ಮಾಡಿದ ತೃಪ್ತಿ ಇದೆ: ಹರ್ಷ
ನಗರ ಅಭಿವೃದ್ಧಿ ಮಾಡಿದ ತೃಪ್ತಿ ಇದೆ: ಹರ್ಷ   

ಕೊಳ್ಳೇಗಾಲ: ಅತ್ಯಲ್ಪ ಅವಧಿಯಲ್ಲೇ ನಗರಸಭೆಯ ಉಪಾಧ್ಯಕ್ಷನಾಗಿ ಜನತೆ ನೆನಪಿನಲ್ಲಿ ಉಳಿಯುವ ಕೆಲಸಗಳನ್ನು ಮಾಡಿರುವ ತೃಪ್ತಿ ನನಗೆ ಇದೆ ಎಂದು ನಗರಸಭೆ ಉಪಾಧ್ಯಕ್ಷ ಜೆ. ಹರ್ಷ ತಿಳಿಸಿದರು.

ಪಟ್ಟಣದ ನಗರಸಭೆ ಸಭಾಂಗಣ ದಲ್ಲಿ ಬುಧವಾರ ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಪಕ್ಷದ ವರಿಷ್ಠರ ಆದೇಶದನ್ವಯ ಆತ್ಮತೃಪ್ತಿಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ ಅವರು ನನಗೆ ದೊರೆತ ಅತ್ಯಲ್ಪ ಅವಧಿಯಲ್ಲಿ ಪೌರಾಯುಕ್ತರ ತೊಂದರೆಯಿಂದ ನಿರೀಕ್ಷಿತ ಕೆಲಸಗಳನ್ನು ಮಾಡಲಾಗಲಿಲ್ಲ. ಪಟ್ಟಣದಲ್ಲಿ ವಿವಿದೆಡೆ ಹೈಮಾಸ್ ದೀಪಗಳ ಅಳವಡಿಕೆ, ಪೀಸ್‌ಪಾರ್ಕ್ ಸಾರ್ವಜನಿಕ ಸೇವೆಗೆ ಸಮರ್ಪಣೆ, ಸೋಡಿಯಂ ದೀಪಗಳ ಅಳವಡಿಕೆ, ಮುಖ್ಯ ರಸ್ತೆಯಲ್ಲಿ ಸಂಚಾರ ನಿಷೇಧ ಸೇರಿದಂತೆ ಜನತೆಯ ನೆನಪಿನಲ್ಲಿ ಉಳಿಯು ಕಾರ್ಯಕ್ರಮಗಳನ್ನು ನಮ್ಮೆಲ್ಲಾ ಸದಸ್ಯರ ಸಹಕಾರದಿಂದ ಮಾಡಲು ಸಾಧ್ಯವಾಯಿತು ಎಂದು ಅವರು ನುಡಿದರು.

ಪಟ್ಟಣದಲ್ಲೇ ನನ್ನ ವಾರ್ಡ್‌ನಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಕಸ ಸಂಗ್ರಹಿಸುವ ಕೆಲಸ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಇತರೆ ವಾರ್ಡ್‌ಗಳಲ್ಲಿಯೂ ಈ ವ್ಯವಸ್ಥೆ ಜಾರಿಗೊಳಿಸವಂತಾಗಬೇಕು ಎಂದು ಸಲಹೆ ನೀಡಿದರು.

ವರಿಷ್ಠರ ಆದೇಶದಂತೆ ಉಪಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಮುಂದಿನ ದಿನಗಳಲ್ಲಿ ಈ ಹಿಂದೆ ನಿರ್ಣಯಿಸಿರುವಂತೆ ಅಲ್ಪಸಂಖ್ಯಾತರಿಗೆ ಈ ಸ್ಥಾನ ಕಲ್ಪಿಸಲು ಈಗಾಗಲೇ ಅಕ್ಮಲ್ ಅವರನ್ನು ಉಪಾಧ್ಯಕ್ಷರನ್ನಾಗಿ ಮುಂದಿನ ಅವಧಿಗೆ ಆಯ್ಕೆಮಾಡಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ತೋಟೇಶ್ ತಿಳಿಸಿದರು.

ಉಪಾಧ್ಯಕ್ಷರ ರಾಜೀನಾಮೆ ಪತ್ರವನ್ನು ಅಧ್ಯಕ್ಷೆ ಮಂಗಳಗೌರಿ ಸ್ವೀಕರಿಸಿದರು. ಸಭೆಯಲ್ಲಿ ನಗರಸಭಾ ಸದಸ್ಯ ಎ.ಪಿ.ಶಂಕರ್, ಅಕ್ಮಲ್, ಚಂದ್ರು, ಮುಖಂಡ ಶಿವಮಲ್ಲು, ರಾಜಣ್ಣ ಇತರರು  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.